ಜಿಲ್ಲೆ

ರಾತ್ರಿ ಫೋನ್ ಕಾಲ್​ ಬಂದ ಬೆನ್ನಲ್ಲೇ ತೆರಳಿದ ಅಪ್ರಾಪ್ತೆ ಬೆಳ್ಳಂಬೆಳಗ್ಗೆ ಕೆರೆಯಲ್ಲಿ ಶವವಾಗಿ ಪತ್ತೆ!

ಹಾಸನ: ಅಪ್ರಾಪ್ತೆಯ ಶವ ಹೊಳೆನರಸೀಪುರ ತಾಲೂಕಿನ ಅಂಕವಳ್ಳಿ ಕೆರೆಯಲ್ಲಿ ಪತ್ತೆಯಾಗಿದ್ದು, ಅತ್ಯಾಚಾರಗೈದು ಕೊಲೆ ಮಾಡಿದ್ದಾರೆಂದು ಅಪ್ರಾಪ್ತೆಯ ಕುಟುಂಬಸ್ಥರು ಆರೋಪಿಸಿದ್ದಾರೆ.

ಮೃತ ಅಪ್ರಾಪ್ತೆ ಕೆರಗೋಡು ಗ್ರಾಮದವಳು. ರಾತ್ರಿ ಊಟ ಮಾಡಿದ ಮೇಲೆ ಮಲಗಿದ್ದೆವು. ಈ ವೇಳೆ ಫೋನ್​ ಮಾಡಿ ಆಕೆಯನ್ನು ಕರೆಸಿಕೊಂಡು ಸಾಮೂಹಿಕವಾಗಿ ಅತ್ಯಾಚಾರವೆಸಗಿ ಅಂಕವಳ್ಳಿ ಕೆರೆಗೆ ನೂಕಿ ಕೊಲ್ಲಲಾಗಿದೆ ಎಂದು ಪಾಲಕರು ಗಂಭೀರ ಆರೋಪ ಮಾಡಿದ್ದಾರೆ.

ಫೋನ್​ ಕಾಲ್ ಆಧಾರದ ಮೇಲೆ ಅಪ್ರಾಪ್ತೆಯನ್ನು ಕರೆಸಿಕೊಂಡ ಯುವಕ ನಮ್ಮ ಊರಿನವನೇ ಎಂದು ಹೇಳಲಾಗುತ್ತಿದೆ. ಕೂಡಲೇ ಆರೋಪಿಗಳನ್ನು ಬಂಧಿಸಲೇಬೇಕುಎಂದು ಪೋಷಕರು ಒತ್ತಾಯಿಸಿದ್ದಾರೆ.

ಶವ ಪತ್ತೆಯಾದ ಸ್ಥಳಕ್ಕೆ ಹೊಳೆನರಸೀಪುರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. (ದಿಗ್ವಿಜಯ ನ್ಯೂಸ್​)