ಜಿಲ್ಲೆ

ರಂಗಸ್ವಾಮಿ ಮಲ್ಲಿಪಟ್ಟಣ ಗ್ರಾಪಂ ಅಧ್ಯಕ್ಷರಾಗಿ ಅವಿರೋಧ ಆಯ್ಕೆ

ಅರಕಲಗೂಡು: ತಾಲೂಕಿನ ಮಲ್ಲಿಪಟ್ಟಣ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಎಂ.ಆರ್. ರಂಗಸ್ವಾಮಿ ಹಾಗೂ ಉಪಾಧ್ಯಕ್ಷರಾಗಿ ಜಯಲಕ್ಷ್ಮಿ ಶನಿವಾರ ಅವಿರೋಧವಾಗಿ ಆಯ್ಕೆಯಾದರು.

ಬಿಜೆಪಿ ಬೆಂಬಲಿತರಾಗಿ ಅಧ್ಯಕ್ಷ ಸ್ಥಾನಕ್ಕೆ ರಂಗಸ್ವಾಮಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಜಯಲಕ್ಷ್ಮೀ ಸ್ಪರ್ಧಿಸಿದ್ದರು. ಇವರ ಪ್ರತಿಸ್ಪರ್ಧಿಯಾಗಿದ್ದ ಸುಮಿತ್ರ ಮತ್ತು ನಾಗರಾಜ್ ನಾಮಪತ್ರ ವಾಪಾಸ್ ಪಡೆದರು. ಹೀಗಾಗಿ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಕಾವೇರಿ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕೆ.ಕೆ. ತಿಮ್ಮಪ್ಪ ಅವರು ರಂಗಸ್ವಾಮಿ ಹಾಗೂ ಜಯಲಕ್ಷ್ಮೀ ಅವರ ಆಯ್ಕೆ ಪ್ರಕಟಿಸಿದರು. ಸಭೆಯಲ್ಲಿ ಎಲ್ಲ 12 ಸದಸ್ಯರು ಪಾಲ್ಗೊಂಡಿದ್ದರು. ಪಿಡಿಒ ರಂಗಸ್ವಾಮಿ ಇದ್ದರು.

ಬಿಜೆಪಿ ಕಾರ್ಯಕರ್ತರು ಹಾಗೂ ರಂಗಸ್ವಾಮಿ ಬೆಂಬಲಿಗರು, ಅಭಿಮಾನಿಗಳು ಮಲ್ಲಿಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ವಿಜಯೋತ್ಸವ ಆಚರಿಸಿ ಸಂಭ್ರಮಿಸಿದರು.