ಅರಕಲಗೂಡು: ತಾಲೂಕಿನ ಕೂಡಲೂರು ಬಳಿ ಇಂದು ಕ್ಯಾಂಟರ್ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಮೃತಪಟ್ಟಿದ್ದಾರೆ.
ಹುಲಿಕಲ್ ಮಾದಾಪುರದ ಜೆಸಿಬಿ ಚಾಲಕ ರೇವಣ್ಣ (೨೬) ಮೃತಪಟ್ಟವ.
ಬೆಂಗಳೂರಿನಿಂದ ಕುಶಾಲನಗರ ಕಡೆಗೆ ಅಂಗಡಿ ಸಾಮಾನುಗಳನ್ನು ಸರಬರಾಜು ಮಾಡಲು ತೆರಳುತ್ತಿದ್ದ ಕ್ಯಾಂಟರ್ ವಾಹನ ಕೊಣನೂರು ಕಡೆಯಿಂದ ರಾಮನಾಥಪುರದತ್ತ ಬರುತ್ತಿದ್ದ ಬೈಕ್ ಗೆ ಕೂಡಲೂರು ತಿರುವಿನಲ್ಲಿ ಡಿಕ್ಕಿ ಹೊಡೆದಿದೆ. ತಲೆಗೆ ಪೆಟ್ಟು ಬಿದ್ದು ತೀವ್ರ ರಕ್ತಸ್ರಾವ ಉಂಟಾಗಿ ಕೊಣನೂರು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಬೈಕ್ ಸವಾರ ಅಸುನೀಗಿದ್ದಾನೆ.
ಕೊಣನೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.