ಜಿಲ್ಲೆ

ಮಾಸ್ಕ್ ಧರಿಸುವ ಶಿಸ್ತು ಮೂಡಲಿ

Hassan

ಹಿಮ್ಸ್ ನಿರ್ದೇಶಕ ಡಾ.ಬಿ.ಸಿ.ರವಿಕುಮಾರ್ ಸಲಹೆ, ಜಿಲ್ಲಾದ್ಯಂತ ಮಾಸ್ಕ್ ದಿನಾಚರಣೆ

ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಕೃಷ್ಣಮೂರ್ತಿ, ಎಎಸ್ಪಿ ನಂದಿನಿ, ಸ್ವಾತಂತ್ರ್ಯ ಹೋರಾಟಗಾರ ಎಚ್.ಎಂ. ಶಿವಣ್ಣ, ಭಾರತ್ ಸ್ಕೌಡ್ ಆ್ಯಂಡ್ ಗೈಡ್ಸ್‌ನ ಅಧಿಕಾರಿ ವೈ.ಎಸ್. ವೀರಭದ್ರಪ್ಪ, ದಲಿಚಂದ್ ಎಂ. ಜೈನ್, ಲೇಖಕಿ ಕೆ.ಟಿ. ಜಯಶ್ರೀ, ಸಮಾಜ ಸೇವಕ ಅಮ್ಜದ್ ಖಾನ್ ಇತರರು ಪಾಲ್ಗೊಂಡಿದ್ದರು.

ಆಶಾ ಕಾರ್ಯಕರ್ತೆಯರು ಕರೊನಾ ಹರಡುವಿಕೆ ತಡೆಗೆ ಅನುಸರಿಸಬೇಕಾದ ಕ್ರಮಗಳ ಮಾಹಿತಿ ಹೊಂದಿರುವ ಫಲಕಗಳನ್ನು ಹಿಡಿದು ಪ್ರಮುಖ ರಸ್ತೆಗಳಲ್ಲಿ ಜಾಥಾ ನಡೆಸಿದರು.

ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಅಧ್ಯಕ್ಷ ಎಚ್.ಪಿ. ಮೋಹನ್ ಮಾತನಾಡಿ, ಕರೊನಾ ಮಹಾಮಾರಿಯನ್ನು ನಿಯಂತ್ರಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಜನರಿಗೆ ಮಾಹಿತಿ ನೀಡುವುದು ಹಾಗೂ ಮಾಸ್ಕ್, ಸ್ಯಾನಿಟೈಸರ್ ವಿತರಣೆಯಂತಹ ಕೆಲಸಗಳ ಮೂಲಕ ರೆಡ್‌ಕ್ರಾಸ್ ಸಂಸ್ಥೆ ಜವಾಬ್ದಾರಿ ನಿಭಾಯಿಸುತ್ತಿದೆ ಎಂದರು.

ಸಾರ್ವಜನಿಕರು ಕೋವಿಡ್-19 ಗಂಭೀರತೆ ಅರ್ಥ ಮಾಡಿಕೊಳ್ಳದೆ ಮಾಸ್ಕ್ ಧರಿಸುವ ಹಾಗೂ ದೈಹಿಕ ಅಂತ ಕಾಪಾಡಿಕೊಳ್ಳುವಂತಹ ಜವಾಬ್ದಾರಿಯನ್ನು ಮರೆಯುತ್ತಿದ್ದಾರೆ. ಇದರಿಂದ ಇಡೀ ಸಮಾಜದ ಮೇಲೆ ದುಷ್ಪರಿಣಾಮವಾಗುವ ಸಾಧ್ಯತೆ ಇದೆ. ಜಾಗೃತಿಯಿಂದ ಮಾತ್ರವೇ ಜನರಿಂದ ಜವಾಬ್ದಾರಿಯುತ ವರ್ತನೆ ನಿರೀಕ್ಷಿಸಲು ಸಾಧ್ಯ ಎಂದು ಹೇಳಿದರು.

ತಹಸೀಲ್ದಾರ್ ಶಿವಶಂಕರಪ್ಪ ಮಾತನಾಡಿ, ಮಾಸ್ಕ್ ದಿನ ಆಚರಣೆಗೆ ರೆಡ್‌ಕ್ರಾಸ್ ಸಂಸ್ಥೆ ಸರ್ಕಾರದೊಂದಿಗೆ ಕೈ ಜೋಡಿಸಿದೆ. ಕರೊನಾ ತಡೆಗಟ್ಟಲು ದೈಹಿಕ ಅಂತ ಕಾಪಾಡಿಕೊಳ್ಳುವುದು, ಸ್ವಚ್ಛತೆಗೆ ಆದ್ಯತೆ ನೀಡುವುದು ಮಾತ್ರವೇ ಮದ್ದು. ಆದ್ದರಿಂದ ಪ್ರತಿಯೊಬ್ಬರೂ ಕರೊನಾ ಸೈನಿಕರಾಗಿ ದುಡಿಯಬೇಕು ಎಂದರು.

ಸೋಂಕು ತಗುಲದಂತೆ ಎಚ್ಚರಿಕೆ ಕ್ರಮಗಳನ್ನು ಅನುಸರಿಸುವುದರಿಂದ ಮಾತ್ರ ಕರೊನಾ ಸೋಂಕಿಗೆ ಕಡಿವಾಣ ಹಾಕಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ಮಾಸ್ಕ್ ಬಳಕೆ ಬಗ್ಗೆ ಜಾಗೃತಿ ಮೂಡಿಸಲು ಸರ್ಕಾರ ಮಾಸ್ಕ್ ದಿನ ಆಚರಿಸಲು ಸೂಚಿಸಿದೆ. ಜನರು ಜಾಗೃತರಾಗಿ ಕರೊನಾ ಹರಡುವಿಕೆಗೆ ಕಡಿವಾಣ ಹಾಕಲು ಸರ್ಕಾರದೊಂದಿಗೆ ಕೈಜೋಡಿಸಬೇಕು. ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಬೇಕು ಎಂದು ಸಲಹೆ ನೀಡಿದರು.

ಸಾರ್ವಜನಿಕ ಸ್ಥಳದಲ್ಲಿ ವ್ಯವಹಾರ, ವಹಿವಾಟು ನಡೆಸುವಾಗ ಮತ್ತು ಜನರ ಮಧ್ಯೆ ಓಡಾಡುವಾಗ ಪ್ರತಿನಿತ್ಯ ಮಾಸ್ಕ್ ಧರಿಸಬೇಕು. ದೈಹಿಕ ಅಂತರವನ್ನು ಪಾಲಿಸಬೇಕು, ವೈಯಕ್ತಿಕ ಶುಚಿತ್ವಕ್ಕೆ ಆದ್ಯತೆ ನೀಡುವುದರೊಂದಿಗೆ ರೋಗನಿರೋಧಕ ಶಕ್ತಿಯನ್ನು ವೃದ್ಧಿಸಿಕೊಳ್ಳುವ ಕಡೆ ಗಮನ ಕೊಡಬೇಕು ಎಂದರು.

ನಗರದ ಹಿಮ್ಸ್ ಆವರಣದಲ್ಲಿ ಗುರುವಾರ ಜಿಲ್ಲಾಡಳಿತ, ಜಿಪಂ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸಹಯೋಗದಲ್ಲಿ ಮಾಸ್ಕ್ ದಿನ ಅಂಗವಾಗಿ ಆಯೋಜಿಸಿದ್ದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.

ಹಾಸನ: ವೈಜ್ಞಾನಿಕ ಕ್ಷೇತ್ರದ ಯಾವುದೇ ಸಂಶೋಧನೆಗಳೂ ಕರೊನಾ ತಡೆಗಟ್ಟಲು ಲಸಿಕೆ ಆವಿಷ್ಕರಿಸಲು ಸಾಧ್ಯವಾಗದಿರುವುದರಿಂದ ಪ್ರತಿಯೊಬ್ಬರೂ ವೈಯಕ್ತಿಕ ಮಟ್ಟದಲ್ಲಿ ಮಾಸ್ಕ್ ಧರಿಸುವಂತಹ ಶಿಸ್ತು ಅಳವಡಿಸಿಕೊಳ್ಳಲೇಬೇಕು ಎಂದು ಹಿಮ್ಸ್ ನಿರ್ದೇಶಕ ಡಾ.ಬಿ.ಸಿ.ರವಿಕುಮಾರ್ ಹೇಳಿದರು.