ಹಾಸನ: ನಗರದ ಕೆ.ಆರ್. ಪುರಂನ ಶಂಕರಮಠದಲ್ಲಿ ಆರಂಭವಾಗಿರುವ ಸಿದ್ಧ ಉಡುಪುಗಳ ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕಡಿಮೆ ಬೆಲೆಯಲ್ಲಿ ಗುಣಮಟ್ಟದ ಬಟ್ಟೆಗಳು ದೊರೆಯುತ್ತಿರುವುದಕ್ಕೆ ನಗರ ಹಾಗೂ ಗ್ರಾಮಾಂತರ ಪ್ರದೇಶ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಕ್ಕಳು, ಮಹಿಳೆಯರು ಹಾಗೂ ಪುರುಷರು ಮುಗಿಬಿದ್ದು ಬಟ್ಟೆ ಖರೀದಿಸುತ್ತಿದ್ದಾರೆ. ಪ್ರಸಿದ್ಧ ಕಂಪನಿಗಳ ಬ್ರಾಂಡೆಡ್ ಉಡುಪುಗಳ ಮಾರಾಟ ಮಾಡಲಾಗುತ್ತಿದೆ.
ಪ್ರತಿದಿನ ಬೆಳಗ್ಗೆ 10 ರಿಂದ ರಾತ್ರಿ 9ರ ವರೆಗೆ ಮಾರಾಟ ಮತ್ತು ಪ್ರದರ್ಶನ ಇರಲಿದ್ದು, ಇದು ಕೆಲವೇ ದಿನಗಳ ವರೆಗೆ ಮಾತ್ರ. ಆಕರ್ಷಕ ರಿಯಾಯಿತಿ ದರದಲ್ಲಿ 50 ಸಾವಿರ ಬಗೆಯ ಲೇಡಿಸ್, ಜೆಂಟ್ಸ್ ಮತ್ತು ಮಕ್ಕಳ ಉಡುಪುಗಳು ಇಲ್ಲಿವೆ. 150 ರಿಂದ 200 ರೂ.ಗೆ ಜಾರ್ಜೆಟ್ ಶಿಫಾನ್ ಪ್ರಿಂಟೆಡ್ ಕ್ರೇಪ್ ಸಿಲ್ಕ್ ಸ್ಯಾರಿ, ಚಾಂದೇರಿ ಸಿಲ್ಕ್ ಸ್ಯಾರಿ, ಕಾಟನ್ ಸ್ಯಾರೀಸ್, ಗ್ರೀನ್ ವಿತ್ ಮೆರೂನ್ ಮುಂತಾದ ಸೀರೆಗಳು, 200-300 ರೂ.ಗೆ ಬ್ರಾ ಮತ್ತು ಪ್ಯಾಂಟೀಸ್ ಸಿಗುತ್ತವೆ. ಜೆಂಟ್ಸ್ ಪ್ಯಾಂಟ್, ನೆಟೆಡ್ ಕಾಟನ್ ಸ್ಟ್ರೆಚ್, ಮುಸ್ಸರೈಸ್ ಕಾಟನ್ ಸ್ಟ್ರೆಚ್, ಸಾರ್ಟಿನ್, ಸಿಲ್ಕಿ, ಕಂಫರ್ಟ್ ಫಿಟ್, ನ್ಯಾರೋ, ಪೆನ್ಸಿಲ್, ರಿಲ್ಯಾಕ್ಸಡ್, ಖ್ಯಾಷುವಲ್ ಪ್ಯಾಂಟ್‌ಗಳು ಕಡಿಮೆ ಬೆಲೆಗೆ ಗ್ರಾಹಕರಿಗೆ ಎಟಕುತ್ತವೆ.
ಟೀ ಶರ್ಟ್, ಕಿಡ್ಸ್ ಪ್ಯಾಂಟ್, ಲೋವೇರ್ ಬರ್ಮುಡಾ, ಟಾಪ್, ಕೇಪ್ರಿ, ಲೇಡಿಸ್ ಪೈಜಾಮ, ಬಾಬಾ ಸೂಟ್, ಫ್ಯಾನ್ಸಿ ಕಿಡ್ಸ್ ಡ್ರೆಸ್, ಸ್ಯಾರಿ, ಕುರ್ತೀಸ್ ಮುಂತಾದವು 200 ರಿಂದ 350 ರೂ.ಗೆ ಸಿಗಲಿವೆ. ಬ್ರಾಂಡೆಡ್ ಡಿಸೈನರ್ ಕುರ್ತಿಗಳಾದ ಮೆಂಟ್ ಗ್ರೀನ್ ಕಾಟನ್, ಎಕ್ಸಲೆಂಟ್ ಪಾರ್ಟಿವೇರ್, ಬ್ಲಾೃಂಕ್ ಪ್ರಿಂಟೆಡ್ ಕಾಟನ್ ಲಾಂಗ್, ಫ್ಯಾನ್ಸಿ ಲೇಟೆಸ್ಟ್ ಡಿಸೈನರ್ ಕುರ್ತಿಗಳು ಮಾರಾಟಕ್ಕಿವೆ. ಉಡುಪು ಖರೀದಿ ಅಥವಾ ಪ್ರದರ್ಶನಕ್ಕೆ ಬರುವ ಗ್ರಾಹಕರು ಪರಸ್ಪರ ಅಂತರ, ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ.