ಜಿಲ್ಲೆ

ಗರ್ಭಪಾತ ವಿಚಾರ ಬಂದಿಲ್ಲ -  ಮುರಳೀಕೃಷ್ಣ ಹಸಂತಡ್ಕ ಸ್ಪಷ್ಟನೆ

Mangaluru - Nishantha Narayana

ಪುತ್ತೂರು: ಸಂತ್ರಸ್ತೆಯ ಮಗುವಿಗೆ ನ್ಯಾಯ ಸಿಗಬೇಕೆಂಬ ಪ್ರಯತ್ನ ಮಾಡಲಾಗಿದೆ. ಯಾವ ಸಂದರ್ಭದಲ್ಲೂ ಮಗುವಿನ ಗರ್ಭಪಾತ ವಿಚಾರ ಯಾವುದೇ ಸಂದರ್ಭದಲ್ಲೂ ಹೇಳಿಲ್ಲ. ಪುತ್ರ ಯಾವುದಕ್ಕೂ ಒಪ್ಪದೆ, ಆತ್ಮಹತ್ಯೆ ಮಾಡುವುದಾಗಿ ಹೇಳುತ್ತಿದ್ದಾರೆ. ಪ್ರಕರಣವನ್ನು ದುಡ್ಡು ನೀಡಿಯಾದರೂ ಮುಗಿಸಿ ಎಂದ ವಿಚಾರವನ್ನು ತಿಳಿಸಿದ್ದಾರೆ ಎಂದು ಬಿಜೆಪಿ ಮುಖಂಡ ಮುರಳೀಕೃಷ್ಣ ಹಸಂತಡ್ಕ ಹೇಳಿದರು.

ಹೆಣ್ಣುಮಗಳಿಗೆ ಅನ್ಯಾಯವಾದ ವಿಚಾರ ಜೂನ್ ೧೮ರಂದು ಗಮನಕ್ಕೆ ಬಂದಿದ್ದು, ಪಿ.ಜಿ.ಜಗನ್ನಿವಾಸ್ ರಾವ್ ಅವರಲ್ಲಿ ಮಾತುಕತೆ ನಡೆಸಿದಾಗ ಮಗ ಒಪ್ಪುತ್ತಿಲ್ಲ ಎಂದಿದ್ದಾರೆ. ಹುಡುಗ ಹುಡುಗಿಯನ್ನು ಒಮ್ಮೆ ಮುಖಾಮುಖಿ ಮಾಡಿಸಿದ್ದು, ಈ ಸಂದರ್ಭ ವಿವಾಹವಾಗುವುದಿಲ್ಲ ಎಂಬ ಹೇಳಿದ್ದಾನೆ. ಹಿಂದು ಹೆಣ್ಣು ಮಗುವಿಗೆ ಸಮಸ್ಯೆಯಾಗವಾರದು ಎಂದು ಜೂ.೨೩ರ ಬಳಿಕ ನೋಂದಣಿ ವಿವಾಹ ಮಾಡುವುದಾಗಿ ಒಪ್ಪಿದ್ದರು. ಜೂ.೨೪ರ ರಾತ್ರಿ ಹುಡುಗನ ಕಡೆಯವರು ಯಾವ ವಿಚಾರದಲ್ಲೂ ಸ್ಪಷ್ಟತೆ ನೀಡಿಲ್ಲ. ಈ ಕಾರಣದಿಂದ ಕಾನೂನು ಹೋರಾಟ ಮುಂದುವರಿಸಿ ನಿಮ್ಮ ಜತೆಗೆ ನಾವಿದ್ದೇವೆ ಎಂಬುದನ್ನು ಸ್ಪಷ್ಟವಾಗಿ ತಿಳಿಸಿದ್ದೇವೆ. ನಾವು ಯಾವುದೇ ಹಣದ ಆಮಿಷ ನೀಡಿಲ್ಲ. ಅವರು ಹೇಳಿದ್ದನ್ನು ಯುವತಿ ಕಡೆಯವರಲ್ಲಿ ಹೇಳಿರುವುದು ನಿಜ ಎಂದು ತಿಳಿಸಿದ್ದಾರೆ.