ಬೆಟ್ಟದಪುರ: ಜಮೀನಿನಲ್ಲಿ ಕಟಾವು ಮಾಡಿದ ಮೆಕ್ಕೆಜೋಳದ ಬೆಳೆಗೆ ಸೋಮವಾರ ರಾತ್ರಿ ಬೆಂಕಿ ಬಿದ್ದು ಸಂಪೂರ್ಣ ಸುಟ್ಟುಹೋಗಿದೆ.
ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಸಮೀಪದ ಸಂಗರಶೆಟ್ಟಹಳ್ಳಿ ಗ್ರಾಮದ ರೈತ ಎಸ್.ಬಿ ನಟೇಶ್ ತಮ್ಮ ಜಮೀನಿನಲ್ಲಿ ಮೆಕ್ಕೆಜೋಳ ಬೆಳೆದಿದ್ದರು. ಈ ಬಾರಿ ಇಳುವರಿ ಉತ್ತಮವಾಗಿ ಬಂದಿತ್ತು. ಸೋಮವಾರ ರಾತ್ರಿ ಕಿಡಿಗೇಡಿಗಳು ಬೆಂಕಿ ಹಾಕಿದ್ದಾರೆ. ಪರಿಣಾಮ ಮೆಕ್ಕೆಜೋಳದ ಬೆಳೆ ಜತೆಗೆ ನೀರಾವರಿಯ 30 ಪೈಪ್ ಸೆಟ್, 25 ಮೀ. ಕೇಬಲ್ ಸುಟ್ಟು ಕರಕಲಾಗಿದೆ.
ರೈತ ನಟೇಶ್ ಅವರಿಗೆ ಅಪಾರ ನಷ್ಟ ಉಂಟಾಗಿದೆ. ಸೋಮವಾರ ರಾತ್ರಿ ನೆರೆಹೊರೆ ಜಮೀನಿನವರು ತಮ್ಮ ಜಮೀನಿಗೆ ನೀರು ಹಾಯಿಸಲು ಹೋದ ಸಂದರ್ಭದಲ್ಲಿ ಪ್ರಕರಣ ಬೆಳಕಿಗೆ ಬಂದಿದೆ.