ಮೂಡಿಗೆರೆ ತೋಟಗಾರಿಕಾ ಮಹಾವಿದ್ಯಾಲಯದಲ್ಲಿ ಎಸ್ಪಿ ಡಾ. ವಿಕ್ರಮ್ ಅಮಟೆ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ನಾರಾಯಣ ಎಸ್. ಮಾವರ್ಕರ್, ಸೋಮೇಗೌಡ, ಶ್ರೀನಾಥ್ ರೆಡ್ಡಿ, ವೆಂಕಟೇಶ್ ಚೌವ್ಹಾಣ್, ಡಾ. ಶಿವಪ್ರಸಾದ್ ಇತರರಿದ್ದರು. 
ಜಿಲ್ಲೆ

ಮಾದಕ ವಸ್ತು ಮಾರಾಟ ಮಾಡಿದರೆ ಕಠಿಣ ಕಾನೂನು ಕ್ರಮ

ಮೂಡಿಗೆರೆ: ಮಾದಕ ವಸ್ತುಗಳ ಮಾರಾಟಗಾರರು ಮತ್ತು ಬಳಸುವವರ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಎಸ್ಪಿ ಡಾ. ವಿಕ್ರಮ್ ಅಮಟೆ ಹೇಳಿದರು.

ತೋಟಗಾರಿಕಾ ಮಹಾವಿದ್ಯಾಲಯದಲ್ಲಿ ಬುಧವಾರ ವಿದ್ಯಾರ್ಥಿಗಳಿಗೆ ಮಾದಕ ವಸ್ತು ಬಳಕೆ ವಿರೋಧಿ ಪ್ರಮಾಣವಚನ ಬೋಧಿಸಿ ಮಾತನಾಡಿ, ಯುವಜನರಲ್ಲಿ ಪ್ರಾರಂಭವಾಗುವ ಮಾದಕ ವಸ್ತುಗಳ ಆಕರ್ಷಣೆ ವ್ಯಸನವಾಗಿ ಮಾರ್ಪಟ್ಟು ಕುಟುಂಬವನ್ನು ಬಲಿ ತೆಗೆದುಕೊಳ್ಳುವ ಹಂತಕ್ಕೆ ಹೋಗುತ್ತದೆ ಎಂದು ತಿಳಿಸಿದರು.
ತೋಟಗಾರಿಕಾ ಮಹಾವಿದ್ಯಾಲಯದ ಡೀನ್ ನಾರಾಯಣ ಎಸ್. ಮಾವರ್ಕರ್ ಮಾತನಾಡಿ, ವಿದ್ಯಾರ್ಥಿ ಹಂತ ಆಕರ್ಷಣೆಯ ಕಾಲ. ಒಳ್ಳೆಯ ವಿಚಾರಗಳಿಗೆ ಮತ್ತು ಸಾಧನೆಗಳಿಗೆ ಆಕರ್ಷಿತರಾಗಬೇಕು ಎಂದರು.
ಜಿಲ್ಲಾ ಮಾದಕ ವ್ಯಸನ ವಿರುದ್ಧ ಘಟಕದ ನೋಡೆಲ್ ಅಧಿಕಾರಿ ವೆಂಕಟೇಶ್ ಚೌವ್ಹಾಣ್, ಸಿಪಿಐ ಸೋಮೇಗೌಡ, ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದ ಸಹ ವಿಸ್ತರಣಾ ನಿರ್ದೇಶಕ ಡಾ. ಎಂ.ಶಿವಪ್ರಸಾದ್, ಪಿಎಸ್‌ಐ ಶ್ರೀನಾಥ್ ರೆಡ್ಡಿ, ಸಹ ಪ್ರಾಧ್ಯಾಪಕ ಡಾ. ಟಿ.ಪಿ.ಭರತ್‌ಕುಮಾರ್, ಸಹಾಯಕ ವಿದ್ಯಾರ್ಥಿ ಕಲ್ಯಾಣ ನಿರ್ದೇಶಕ ಎಸ್.ಕೆ.ಮಂಜುನಾಥ್, ಡಾ. ಧನಂಜಯ ಸ್ವಾಮಿ ಇತರರಿದ್ದರು.