ಹರಪನಹಳ್ಳಿಯಲ್ಲಿ ಗುರುವಾರ ಏರ್ಪಡಿಸಿದ್ದ ಶರಣ ಸಾಹಿತ್ಯ ಪರಿಷತ್ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಹಿರಿಶಾಂತವೀರ ಸ್ವಾಮೀಜಿ, ಶಸಾಪ ತಾಲೂಕು ಅಧ್ಯಕ್ಷ ಷಣ್ಮುಖಪ್ಪ ಪೂಜಾರ್, ಕೊಟ್ರಮ್ಮ ದಿವಾಕರ್, ವಿಜಯ್ ಕುಮಾರ್, ಬಣಕಾರ ರಾಜಶೇಖರ, ಎಂ.ರಾಜಶೇಖರ್, ಪುಷ್ಪಾ ದಿವಾಕರ್, ಪಾಟೀಲ್ ಬೆಟ್ಟನಗೌಡ, ಎಂಟಿ ಸುಭಾಶ್ಚಂದ್ರ, ಕೆಎಂ ಶಿವಾನಂದಯ್ಯ ಇತರರಿದ್ದರು. 
ಜಿಲ್ಲೆ

ಸಾಹಿತ್ಯಕ್ಕಿದೆ ಅಜ್ಞಾನ ಕಳಚುವ ಶಕ್ತಿ

ಹರಪನಹಳ್ಳಿ: ಸಮಾಜದಲ್ಲಿರುವ ಮೌಢ್ಯತೆ ತೊಳೆಯುವಲ್ಲಿ ವಚನಸಾಹಿತ್ಯ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೆ.ರವೀಂದ್ರನಾಥ ತಿಳಿಸಿದರು.

ಪಟ್ಟಣದ ಕಾಶಿಮಠದಲ್ಲಿ ಗುರುವಾರ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ನಿಂದ ಆಯೋಜಿಸಿದ್ದ ಶರಣ ಸಾಹಿತ್ಯ ಪರಿಷತ್ ಸಂಸ್ಥಾಪನಾ ದಿನಾಚರಣೆ ಮತ್ತು ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಮಾಜದಲ್ಲಿ ಅಡಗಿರುವ ಸಮಸ್ಯೆಗಳನ್ನು ಸಾಹಿತ್ಯದ ರೂಪದಲ್ಲಿ ಪ್ರಚುರಪಡಿಸಬೇಕು. ವ್ಯಕ್ತಿಯ ಅಜ್ಞಾನ ಕಳಚುವ ಶಕ್ತಿ ಸಾಹಿತ್ಯಕ್ಕಿದೆ ಎಂದು ತಿಳಿಸಿದರು.

ನಿವೃತ್ತ ಪ್ರಾಧ್ಯಾಪಕ ಎಸ್.ಶಿವಾನಂದ ಮಾತನಾಡಿ, ಪಂಚೇಂದ್ರಿಯಗಳನ್ನು ನಿಯಂತ್ರಣದಲ್ಲಿರಿಸಿದಾಗ ಬದುಕು ಉಲ್ಲಾಸ ಭರಿತವಾಗಿರುತ್ತದೆ. ಶಿವಯೋಗವನ್ನು ಏಕಾಂತ ಚಿತ್ತದಿಂದ ಮಾಡಿದಾಗ ಭಾವದಲ್ಲಿ ದಿಗಂಬರತ್ವ ಮೂಡಿಸಿಕೊಂಡಾಗ ಮನೋಲ್ಲಾಸದಿಂದ ಜೀವಿಸಬಹುದು. ಭೂಮಿಯ ಯಾವ ವಸ್ತುಗಳು ಮಾನವನಿಗೆ ಸೇರಿಲ್ಲ. ಅದು ದೇವನ ಕೃಪೆ. ದೇವನು ಕೊಟ್ಟ ಅಪರೂಪದ ಬದುಕನ್ನು ಸಾರ್ಥಕಗೊಳಿಸಿಕೊಳ್ಳೋಣ ಎಂದರು.