ಹರಪನಹಳ್ಳಿ ಮೇಗಳಪೇಟೆಯಲ್ಲಿ ಶುಕ್ರವಾರ ಅಮ್ಮನಿಗೆ ನೈವೇದ್ಯವನ್ನು ಅರ್ಪಿಸಿ ಭಕ್ತಿಯಿಂದ ಜನರು ಪ್ರಾರ್ಥಿಸಿದರು. ಪ್ರಮುಖರಾದ ಪಿ.ಬಿ.ಗೌಡ. ಬಣಕಾರ ಜಗದೀಶ್, ಹಂಪಾಪಟ್ಟಣ ಕೊಟ್ರೇಶ್, ವೀರಭದ್ರಪ್ಪ ಎಂ. ಕೊಟ್ರಯ, ಬಿ.ಎಂ.ಉಮಾಪತಿ, ಮಟ್ಟಿ ಮಲ್ಲಿಕಾರ್ಜುನ, ಬಡಿಗೇರ ನಾಗರಾಜ, ಅಶೋಕ ಕುಮಾರ ಇತರರಿದ್ದರು. 
ಜಿಲ್ಲೆ

ರೋಗಬಾಧೆಗಳು ಬಾರದಂತೆ ಭಕ್ತರಿಂದ ಪ್ರಾರ್ಥನೆ

ಹರಪನಹಳ್ಳಿ: ಮಳೆ ಬೆಳೆ ಸಮೃದ್ಧಿಗಾಗಿ ಹಾಗೂ ರೋಗಬಾಧೆಗಳು ಬಾರದಂತೆ ಪ್ರಾರ್ಥಿಸಿ ಪಟ್ಟಣದ ಮೇಗಳಪೇಟೆಯಲ್ಲಿ ಶುಕ್ರವಾರ ಅಮ್ಮನನ್ನು ಕಳಿಸಲಾಯಿತು.

ಬ್ರೂಸ್ ಪೇಟೆ, ತೆಲುಗರ ಓಣಿ, ಬಂಗ್ಲೇರ್ ಓಣಿ, ಕುರುಬರ ಓಣಿ, ಕೊಟ್ಟೂರು ಸರ್ಕಲ್, ಕೆಎಚ್‌ಬಿ ಕಾಲನಿ, ಭಾರತಿ ನಗರ ಸೇರಿ ಪಟ್ಟಣದ ವಿವಿಧ ಕಾಲನಿಗಳ ಜನರು ಭಕ್ತಿಯಿಂದ ಪ್ರತಿ ಮನೆಯಲ್ಲೂ ಹೋಳಿಗೆ, ಅನ್ನ, ಪಲ್ಯಗಳ ನೈವೇದ್ಯ ಮಾಡಿದ್ದರು. ಬೇವಿನ ಸೊಪ್ಪು ಹಾಗೂ
ಬಾಳೆಹಣ್ಣು ಊದಿನ ಕಡ್ಡಿಯನ್ನು ಒಂದು ಕುಂಡದಲ್ಲಿ ಹಾಕಿ ಮೇಗಳಪೇಟೆಯ ನಡುರಸ್ತೆಯಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿದ್ದ ಅಮ್ಮನ ದೇವಸ್ಥಾನದ ಎದುರುಗಡೆ ಸಮರ್ಪಿಸಿದರು.