ಹರಪನಹಳ್ಳಿ: ಮನುಷ್ಯನಿಗೆ ಧರ್ಮದ ತಳಹದಿಯಲ್ಲಿ ಜಾತ್ಯತೀತ, ಸಾಮರಸ್ಯ ಬದುಕು ಅವಶ್ಯಕ ಎಂದು ಶ್ರೀ ಶಾಂತಲಿಂಗ ದೇಶಿಕೇಂದ್ರ ಶ್ರೀಗಳು ಹೇಳಿದರು.
ಅರಸೀಕೆರೆ ಗ್ರಾಮದ ಕೋಲಶಾಂತೇಶ್ವರ ಮಠದಲ್ಲಿ ಭಾನುವಾರ ಪ್ರಗತಿಪರ ಹೋರಾಟಗಾರ ದಿ.ಕಬ್ಬಳ್ಳಿ ಬಸವರಾಜ್ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಠದ ಭಕ್ತನಾಗಿ ಹೋರಾಟದ ಬದುಕಿನಲ್ಲಿ ಬೆಳೆದ ಕಬ್ಬಳ್ಳಿ ಬಸವರಾಜ್ ಹಣದಲ್ಲಿ ಶ್ರೀಮಂತಿಕೆ ಗಳಿಸದೆ ಪರೋಪಕಾರಿಯಾಗಿ ಜನರ ಮನಸ್ಸು ಗೆದ್ದಿದ್ದರು. ಅನ್ಯಾಯ, ಶೋಷಣೆ ವಿರುದ್ಧ ಹೋರಾಡಿದ್ದರು. ಅವರ ಹಾದಿಯಲ್ಲಿ ಯವ ಮುಖಂಡರು ನಡೆಯಬೇಕು ಎಂದು ಸಲಹೆ ನೀಡಿದರು.
ಮಾಜಿ ಶಾಸಕ ಎಚ್.ಪಿ.ರಾಜೇಶ್, ವಾಲ್ಮೀಕಿ ಸಮಾಜದ ತಾಲೂಕು ಅಧ್ಯಕ್ಷ ವೈ.ಡಿ.ಅಣ್ಣಪ್ಪ, ಪ್ರಗತಿಪರ ಹೋರಟಗಾರ ಹೊಸಳ್ಳಿ ಮಲ್ಲೇಶ್, ಪ್ರಗತಿಪರ ಚಿಂತಕ ಕೋಡಿಹಳ್ಳಿ ಭೀಮಪ್ಪ, ಕಸಾಪ ತಾಲೂಕು ಅಧ್ಯಕ್ಷ ಕೆ.ಉಚ್ಚೆಂಗಪ್ಪ, ಪುರಸಭೆ ಮಾಜಿ ಅಧ್ಯಕ್ಷ ಎಚ್.ಕೆ ಹಾಲೇಶ್, ವಕೀಲ ಕೆ.ಡಿ.ಮರಿಯಪ್ಪ, ಗ್ರಾಪಂ ಅಧ್ಯಕ್ಷ ಶ್ರೀನಿವಾಸ್, ಪ್ರಮುಖರಾದ ಬೂದಿಹಾಳ್ ಮಂಜುನಾಥ್, ಪ್ರಶಾಂತ್ ಪಟೇಲ್, ಬಸಮ್ಮ, ಬಾಲೇನಹಳ್ಳಿ ರೇವಣಸಿದ್ದಪ್ಪ, ಹೆಗ್ಗೇರಿ ರಂಗಪ್ಪ, ಮೋತಿನಾಯ್ಕ, ಗುಡಿಹಳ್ಳಿ ಹಾಲೇಶ್, ಕೆ.ಪಿ.ಪಾಲಯ್ಯ,ಪೂಜಾರ ಮರಿಯಪ್ಪ ಇತರರಿದ್ದರು.