ಹರಪನಹಳ್ಳಿ ತಾಲೂಕು ಪಂಚಾಯಿತಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ಸ್ವಯಂ ಉದ್ಯೋಗಿಗಳಿಗೆ 30 ದಿನಗಳ ತರಬೇತಿ ಕಾರ್ಯಕ್ರಮವನ್ನು ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ಉದ್ಘಾಟಿಸಿದರು. ಪುರಸಭೆ ಅದ್ಯೆಕ್ಷೆ ಫಾತೀಮಾ ಬೀ, ಇಒ ಚಂದ್ರಶೇಖರ್ ವೈ ಎಚ್., ತರಬೇತುದಾರ ನಾಗರಾಜ್ ಡಿ.ಎಂ., ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ.ಅಂಜಿನಪ್ಪ, ಪುರಸಭೆ ಸದಸ್ಯರಾದ ರಹೀಂ ಸಾಬ್, ರಾಜಣ್ಣ ಇದ್ದರು. 
ಜಿಲ್ಲೆ

ಸ್ತ್ರೀಯರು ಸ್ವಾವಲಂಬಿ ಬದುಕಿಗೆ ಒತ್ತು ನೀಡಲಿ

ಪ್ರವೀಣ ಉದುಸಾ ದಲಬಂಜನ್

ಹರಪನಹಳ್ಳಿ: ಮಹಿಳೆಯರು ಸ್ವಾವಲಂಬಿಯಿಂದ ಜೀವನ ಸಾಗಿಸಲು ಗುಡಿ ಕೈಗಾರಿಕೆ ಉದ್ಯಮ ಆರಂಭಿಸಲಿ ಎಂದು ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ಹೇಳಿದರು.

ಪಟ್ಟಣದ ತಾಲೂಕು ಪಂಚಾಯಿತಿ ರಾಜೀವ್ ಗಾಂಧಿ ಸಭಾಂಗಣದಲ್ಲಿ ಮಂಗಳವಾರ ಕೆಕೆಆರ್‌ಡಿಬಿ ಹಾಗೂ ಜೀವನೋಪಾಯ ಕರ್ನಾಟಕ ಉದ್ಯಮಶೀಲಾಭಿವೃದ್ಧಿ ಸಂಯುಕ್ತಾಶ್ರಯದಲ್ಲಿ ಬ್ಯೂಟಿ ಪಾರ್ಲರ್ ಮ್ಯಾನೇಜ್ಮೆಂಟ್ ವಲಯಾಧಾರಿತ ಉದ್ಯಮಶೀಲತೆಗೆ 30 ದಿನಗಳ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಸರ್ಕಾರದಿಂದ ಮಹಿಳೆಯರಿಗೆ ಸಾಕಷ್ಟು ಸೌಲಭ್ಯಗಳನ್ನು ನೀಡಲಾಗುತ್ತಿದೆ. ಅವುಗಳನ್ನು ಸದುಪಯೋಗಪಡಿಸಿಕೊಂಡು ಉದ್ಯೋಗವನ್ನು ಕಂಡು ಕೊಳ್ಳಬೇಕು ಎಂದರು.

ಕೆಕೆಆರ್‌ಡಿಬಿ ಜಂಟಿ ನಿರ್ದೇಶಕ ಜಿ.ಯು.ಹುಡೇದ್ ಅವರು ಮಾತನಾಡಿ, ಶಿಬಿರದಲ್ಲಿ ಸಂವಹನಾ ಕೌಶಲ, ಯೋಜನಾ ವರದಿ ತಯಾರಿಕೆ, ಮಾರುಕಟ್ಟೆ ಸಮೀಕ್ಷೆ ಸೇರಿ ಇನ್ನು ಉಳಿದ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.