ಶಾಸಕ ಜಿ.ಕರುಣಾಕರರೆಡ್ಡಿ ಮನವಿ
ಹರಪನಹಳ್ಳಿ: ಸ್ವಾತಂತ್ರ್ಯಕ್ಕಾಗಿ ತ್ಯಾಗ, ಬಲಿದಾನ ಮಾಡಿದ ಹೋರಾಟಗಾರರ ನೆನಪಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹರ ಘರ್ ತಿರಂಗಾ ಕಾರ್ಯಕ್ರಮ ಆಯೋಜಿಸಿದ್ದು, 75ನೇ ವರ್ಷದ ಸ್ವಾತಂತ್ರ್ಯೋತ್ಸವವನ್ನು ಎಲ್ಲ ಪಕ್ಷಗಳ ಮುಖಂಡರು, ಕಾರ್ಯಕರ್ತರು ಸೇರಿ ಹಬ್ಬದಂತೆ ಆಚರಿಸಬೇಕು ಎಂದು ಶಾಸಕ ಜಿ.ಕರುಣಾಕರರೆಡ್ಡಿ ಹೇಳಿದರು.
ಶ್ರೀ ಗೋಣಿಬಸವೇಶ್ವರದಲ್ಲಿ ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದರು. ಇದಕ್ಕೂ ಮುಂಚೆ ಕೂಲಹಳ್ಳಿ ಗ್ರಾಮದಲ್ಲಿ ಮಂಗಳವಾರ ಶ್ರೀ ಗೋಣಿಬಸವೇಶ್ವರ ದೇವಸ್ಥಾನದಿಂದ ಗ್ರಾಮಸ್ಥರು, ಯುವಕರು ಕೈಯಲ್ಲಿ ಸ್ವಾತಂತ್ರ್ಯ ಬಾವುಟವನ್ನು ಹಿಡಿದು ದೇಶಭಕ್ತಿಗೀತೆಗಳನ್ನು ಹಾಡುತ್ತ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಮನೆಮನೆಗೆ ಭೇಟಿ ನೀಡಿ, ರಾಷ್ಟ್ರಧ್ವಜ ಹಾರಿಸುವ ಬಗ್ಗೆ ಜಾಗೃತಿ ಮೂಡಿಸಿದರು. ಸಂಗೀತ ಶಿಕ್ಷಕ ಬಸವರಾಜ ಭಂಡಾರಿ ದೇಶಭಕ್ತಿಗೀತೆ ಹಾಡಿ ಗಮನ ಸೆಳೆದರು.
ಪ್ರಮುಖರಾದ ವಿಷ್ಣುರೆಡ್ಡಿ, ಗೋಂದಿ ಮಂಜುನಾಥ, ಆರ್.ಲೋಕೇಶ್, ಬಾಗಳಿ ಕೊಟ್ರೇಶಪ್ಪ, ಎಂ.ಮಲ್ಲೇಶ್, ಪೂಜಾರ ಕೊಟ್ರೇಶ್, ಎನ್.ಸಿದ್ದೇಶ್, ಕಂದಾಯ ಅಧಿಕಾರಿ ಅರವಿಂದ ಇತರರು ಇದ್ದರು.