ಮಾ.28ಎಚ್‌ಆರ್‌ಪಿ-03 ಹರಪನಹಳ್ಳಿ ತಾಲೂಕಿನ ಕೆಂಚಾಪುರ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಜೀರ್ಣೋದ್ಧಾರಗೊಂಡ ಕೆರೆ ಹಸ್ತಾಂತರಿಸಲಾಯಿತು. ಕೆರೆ ಸಮಿತಿ ಅಧ್ಯಕ್ಷ ರೇವಪ್ಪ, ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಮಹೇಶಪ್ಪ, ಪ್ರಮುಖರಾದ ಶೈಲಜಾ, ಮಮತಾ ಸಿದ್ದನಗೌಡ, ಬಸಣ್ಣ, ಚಂದ್ರಪ್ಪ, ಏಕಾಂತಪ್ಪ, ಬಸವರಾಜ, ರೇಣುಕಮ್ಮ, ಶೇಖರಪ್ಪ, ಹನುಮಂತಪ್ಪ, ಗಿರೀಶ, ಪಾಲಾಕ್ಷಪ್ಪ, ಬಾಬು ಇತರರಿದ್ದರು. 
ಜಿಲ್ಲೆ

ನಶಿಸುವ ಸ್ಥಿತಿಗೆ ತಲುಪಿದ ಕೆರೆಗಳು - ಜನಜಾಗೃತಿ ಸಂಘದ ಅಧ್ಯಕ್ಷ ಗುಂಡಗತ್ತಿ ಮಂಜುನಾಥ ಕಳವಳ

ಹರಪನಹಳ್ಳಿ: ಮನುಷ್ಯ ಹಾಗೂ ಪ್ರಾಣಿ-ಪಕ್ಷಿಗಳಿಗೆ ನೀರಿನ ಬವಣೆ ನೀಗಿಸಲು ಕೆರೆಗಳು ಸಹಕಾರಿಯಾಗಿದ್ದು, ಅವುಗಳನ್ನು ಪೋಷಿಸುವ ಕಾರ್ಯವನ್ನು ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ ಮಾಡುತ್ತಿದೆ ಎಂದು ಅಖಿಲ ಕರ್ನಾಟಕ ಜನಜಾಗೃತಿ ಸಂಘದ ಅಧ್ಯಕ್ಷ ಗುಂಡಗತ್ತಿ ಮಂಜುನಾಥ ಹೇಳಿದರು.

ತಾಲೂಕಿನ ಕೆಂಚಾಪುರ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ‘ನಮ್ಮೂರು-ನಮ್ಮ ಕೆರೆ’ ಯೋಜನೆಯಡಿ ಜೀರ್ಣೋದ್ಧಾರಗೊಂಡ ಕೆರೆ ಹಸ್ತಾಂತರ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದರು. ವಿವಿಧ ಕಾರಣಗಳಿಂದ ಕೆರೆಗಳು ಹೂಳು ತುಂಬಿ, ಜಾಲಿ ಬೆಳೆದು ನಶಿಸಿ ಹೋಗುವ ಸ್ಥಿತಿ ತಲುಪಿದೆ. ಅವುಗಳನ್ನು ಪೋಷಿಸುವ ಕಾರ್ಯವನ್ನು ಧರ್ಮಸ್ಥಳ ಸಂಸ್ಥೆ ಮಾಡುತ್ತಿದೆ ಎಂದರು.

ಗ್ರಾಪಂ ಅಧ್ಯಕ್ಷೆ ಆಶಾ ಸತೀಶ ಮಾತನಾಡಿ, ಕಾಲ ಕಳೆದಂತೆ ನಮ್ಮ ಪೂರ್ವಜರು ಬಿಟ್ಟು ಹೋದ ಜಲ ಸಂಪನ್ಮೂಲ ಕುಂಠಿತಗೊಳ್ಳುತ್ತಿದ್ದು, ಈಗಿನ ಪೀಳಿಗೆ ಅವುಗಳ ರಕ್ಷಣೆಗೆ ಮುಂದಾಗಬೇಕು. ಈ ನಿಟ್ಟಿನಲ್ಲಿ ಧರ್ಮಸ್ಥಳ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು. ದಾವಣಗೆರೆ ಧರ್ಮಸ್ಥಳ ಸಂಘದ ಜಿಲ್ಲಾ ನಿರ್ದೇಶಕ ಜನಾರ್ದನ, ರೈತ ಸಂಘದ ತಾಲೂಕು ಅಧ್ಯಕ್ಷ ಕರಡಿದುರ್ಗ ಚೌಡಪ್ಪ ಮಾತನಾಡಿದರು.