ಜಿಲ್ಲೆ

ಶಿವಪುರ ತಾಂಡಾದಲ್ಲಿ ವಾಲಿಬಾಲ್ ಪಂದ್ಯ

ಹರಪನಹಳ್ಳಿ: ತಾಲೂಕಿನ ಶಿವಪುರ ತಾಂಡಾದಲ್ಲಿ ದೀಪಾವಳಿ ಅಂಗವಾಗಿ ಬಂಜಾರ ಸಮುದಾಯದ ಹಾಗೂ ಗ್ರಾಪಂ ಸದಸ್ಯರ ಸಹಯೋಗದಲ್ಲಿ ವಾಲಿಬಾಲ್ ಕ್ರೀಡಾಕೂಟ ಸೋಮವಾರ ಜರುಗಿತು.

ಅಕ್ಷರ ಸೀಡ್ಸ್ ಮಾಲೀಕ, ಕಾಂಗ್ರೆಸ್ ಮುಖಂಡ ಅರಸೀಕೆರೆ ಎನ್.ಕೋಟ್ರೇಶ್ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿ, ಬಂಜಾರ ಸಮುದಾಯ ದೀಪಾವಳಿ ಹಬ್ಬವನ್ನು ಹಿಂದಿನ ಕಾಲದಿಂದಲೂ ವಿಶಿಷ್ಟ ರೀತಿಯಲ್ಲಿ ಆಚರಿಸುತ್ತ ಬಂದಿದೆ. ಇಂದು ಇಂತಹ ಕ್ರೀಡಾಕೂಟ ಆಯೋಜಿಸುವ ಮೂಲಕ ಯುವಕರಿಗೆ ಸ್ಫ್ಪೂರ್ತಿಯಾಗಿದ್ದಾರೆ. ಯುವಕರು ಕ್ರೀಡಾಕೂಟದಲ್ಲಿ ಭಾಗವಹಿಸಿ, ದೈಹಿಕ, ಮಾನಸಿಕ ಆರೋಗ್ಯ ಹೆಚ್ಚಿಸಿಕೊಳ್ಳಬೇಕು ಎಂದರು.

ಗ್ರಾಮದ ಮುಖಂಡರಾದ ಗೋಪಿ ನಾಯ್ಕ, ಪುಟ್ಟ ನಾಯ್ಕ ಗೌಡರು ಮಂಜ್ಯಾ ನಾಯ್ಕ, ಎಂ.ಪರಶುರಾಮ, ಗ್ರಾಪಂ ಸದಸ್ಯರಾದ ಲಕ್ಷ್ಮಣ ನಾಯ್ಕ, ಪ್ರಸನ್ನ ನಾಯ್ಕ, ಕುಮಾರ ನಾಯ್ಕ, ಶೇಖರ ನಾಯ್ಕ, ಸಿದ್ದೇಶ್ವರ ರೆಡ್ಡಿ, ಎನ್. ಪರಶುರಾಮಣ್ಣ, ಭೋಜನಾಯ್ಕ, ಸುನೀಲ ನಾಯ್ಕ, ನಾಗೇಂದ್ರ ನಾಯ್ಕ, ಪೃಥ್ವಿ ನಾಯ್ಕ ಇತರರು ಇದ್ದರು.