ಅರಸೀಕೆರೆ ಗ್ರಾಮದ ಕೋಲಶಾಂತೇಶ್ವರ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಮಂಗಳವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಶ್ರೀಮಠದ ಶಾಂತಲಿಂಗ ದೇಶೀಕೇಂದ್ರ ಸ್ವಾಮೀಜಿ ಮಾತನಾಡಿದರು. ಪ್ರಾಚಾರ್ಯ ನಾರನಗೌಡ, ಪ್ರಮುಖರಾದ ಆದಿಮನಿ ರಮೇಶ, ಪ್ರಶಾಂತ್ ಪಾಟೀಲ್, ಮಂಜುನಾಥ, ನಾಗೇಶ, ಬೆಟ್ಟಪ್ಪ, ಅಜ್ಜಯ್ಯ, ಬಸಮ್ಮ, ಪೂಜಾ, ರೇಖಾ, ವೃಷಭೇಂದ್ರಯ್ಯ ಇತರರಿದ್ದರು. 
ಜಿಲ್ಲೆ

ಶಿಕ್ಷಣದಿಂದ ಸಾಧನೆ ಮಾಡಲು ಸಾಧ್ಯ

ನರೇಶ್ ಕುಮಾರ್

ಹರಪನಹಳ್ಳಿ: ವಿದ್ಯಾರ್ಥಿ ಜೀವನದಲ್ಲಿ ಆಲಸ್ಯ ಮನೋಭಾವ ಇರಬಾರದು. ಚುರುಕುತನದಿಂದ ಜ್ಞಾನಾರ್ಜನೆ ಪಡೆಯಬೇಕು ಎಂದು ಅರಸೀಕೆರೆ ಕೋಲಶಾಂತೇಶ್ವರ ಮಠದ ಪೀಠಾಧಿಪತಿ ಶಾಂತಲಿಂಗ ದೇಶೀಕೇಂದ್ರ ಸ್ವಾಮೀಜಿ ಹೇಳಿದರು.

ಅರಸೀಕೆರೆ ಗ್ರಾಮದ ಕೋಲಶಾಂತೇಶ್ವರ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಮಂಗಳವಾರ ದ್ವಿತೀಯ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದ ಸಾನ್ನಿಧ್ಯವಹಿಸಿ ಮಾತನಾಡಿದರು. ಶ್ರದ್ಧೆಯಿಂದ ಶಿಕ್ಷಣ ಪಡೆದಲ್ಲಿ ಯಾವುದೇ ರಂಗದಲ್ಲಾದರೂ ಛಾಪು ಮೂಡಿಸಲು ಸಾಧ್ಯ. ಶಿಕ್ಷಣ ಹಂತದಲ್ಲಿ ಸಂಸ್ಕಾರದ ಅರಿವನ್ನು ಬೆಳೆಸಿಕೊಂಡಲ್ಲಿ ವಿದ್ಯೆ ಅದಾಗಿಯೇ ಒಲಿಯುತ್ತದೆ ಎಂದರು.

ಸಂಡೂರು ವಿರಕ್ತಮಠದ ಪ್ರಭು ಸ್ವಾಮೀಜಿ ಮಾತನಾಡಿ, ಉತ್ತಮ ಶಿಕ್ಷಣ ಪಡೆದಲ್ಲಿ ನೀರುದ್ಯೋಗ ಸಮಸ್ಯೆ ಹೋಗಲಾಡಿಸಿ ಆರ್ಥಿಕವಾಗಿ ಪ್ರಬಲರಾಗಬಹುದು. ತಾಂತ್ರಿಕ ವಿಷಯಗಳನ್ನು ಆಯ್ಕೆ ಮಾಡಿಕೊಂಡರೆ ಸರ್ಕಾರಿ ನೌಕರಿಗಾಗಿ ಕಾಯದೆ ಸ್ವಯಂ ಉದ್ಯೋಗ ಮಾಡಿ ಸ್ವಾವಲಂಬಿ ಜೀವನ ನಡೆಸಬಹುದು ಎಂದು ತಿಳಿಸಿದರು.