ಕೋಟೆಪ್ಪ  
ಜಿಲ್ಲೆ

ಕಾನ್‌ಸ್ಟೇಬಲ್ ಹೃದಯಾಘಾತದಿಂದ ಸಾವು

ಪ್ರವೀಣ ಉದುಸಾ ದಲಬಂಜನ್

ಹರಪನಹಳ್ಳಿ: ಅರಸೀಕೆರೆ ಠಾಣೆ ಕಾನ್‌ಸ್ಟೇಬಲ್ ಕೆ.ಕೋಟೆಪ್ಪ (36) ಕರ್ತವ್ಯದಲ್ಲಿರುವಾಗಲೇ ಹೃದಯಾಘಾತದಿಂದ ಬುಧವಾರ ನಿಧನರಾದರು. ಬೆಳಗಿನ ಜಾವ 5 ಗಂಟೆಗೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸಹೋದ್ಯೋಗಿಗಳ ನೆರವಿನೊಂದಿಗೆ ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಕೋಟೆಪ್ಪ ಮೃತಪಟ್ಟಿದ್ದಾರೆ. ಇವರಿಗೆ ತಾಯಿ, ಪತ್ನಿ, ಪುತ್ರಿ ಇದ್ದಾರೆ. ಪತ್ನಿ ಗರ್ಭಿಣಿಯಾಗಿರುವಾಗ ಗಂಡನ ಸಾವು ಬರಸಿಡಿಲು ಬಡಿದಂತಾಗಿದೆ. ಹಡಗಲಿ ತಾಲೂಕು ಉತ್ತಂಗಿಯಲ್ಲಿ ಗುರುವಾರ ಅಂತ್ಯಕ್ರಿಯೆ ನಡೆಯಲಿದೆ.