ಜಿಲ್ಲೆ

ಚಾಲಕನ ನಿತಂತ್ರಣ ತಪ್ಪಿ ಅಂಗಡಿಗೆ ನುಗ್ಗಿದ ಟೆಂಪೋ: 13 ವರ್ಷದ ಬಾಲಕ ಸಾವು

ಗಂಗಾಧರ ಬಿ ವಿ
ಹಾರೋಹಳ್ಳಿ (ರಾಮನಗರ): ಚಾಲಕನ ನಿತಂತ್ರಣ ತಪ್ಪಿ ಟೆಂಪೋವೊಂದು ಅಂಗಡಿಗೆ ನುಗ್ಗಿದ ಪರಿಣಾಮ ಹದಿಮೂರು ವರ್ಷದ ಮಗುವೊಂದು ಮೃತಪಟ್ಟ ಘಟನೆ ಕಗ್ಗಲೀಪುರ ಪೋಲೀಸ್ ಠಾಣಾ ವ್ಯಾಪ್ತಿಯ ರಾಚೇನಮಡು ಗ್ರಾಮದಲ್ಲಿ ಭಾನುವಾರ  ನಡೆದಿದೆ. 

ರಾಚೇನಮಡು ಗ್ರಾಮದ ಜೀವನ್ ಮೃತ ದುರ್ದೈವಿಯಾಗಿದ್ದು, ತಲಘಟ್ಟಪುರದಿಂದ ಟೆಂಪೋವೊಂದು ಕಬ್ಬಿಣ ತುಂಬಿಕೊಂಡು ಕಗ್ಗಲೀಪುರದ ಕಡೆಗೆ ಬರುವಾಗ ಅಂಗಡಿಗೆ ನುಗ್ಗಿದ್ದರಿಂದ ಅಲ್ಲಿಯೇ ಇದ್ದ ಬಾಲಕ ಸಾವನ್ನಪ್ಪಿದ್ದಾನೆ.

407 ವಾಹನ ಚಾಲಕನಿಗೆ ಗಂಭೀರಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.  ಮೃತದೇಹವನ್ನು ಶವ ಪರೀಕೆಗಾಗಿ ರಾಜರಾಜೇಶ್ವರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಕಗ್ಗಲೀಪುರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.