ಜಿಲ್ಲೆ

ಹಾರೋಬೆಳವಡಿ ಶ್ರೀ ವೀರಭದ್ರೇಶ್ವರ ಜಾತ್ರೆ

ಮಂಜುನಾಥ ಅಂಗಡಿ

ವಿಜಯವಾಣಿ ಸುದ್ದಿಜಾಲ ಧಾರವಾಡ
ತಾಲೂಕಿನ ಶ್ರೀಕ್ಷೇತ್ರ ಹಾರೋಬೆಳವಡಿ ಗ್ರಾಮದ ಜಾಗೃತ ಶ್ರೀ ವೀರಭದ್ರೇಶ್ವರ ದೇವರ ಜಾತ್ರಾ ಮಹೋತ್ಸವ ಸೋಮವಾರ ವಿಜೃಂಭಣೆಯಿ೦ದ ಜರುಗಿತು. ಬೆಳಗ್ಗೆ ಶ್ರೀ ವೀರಭದ್ರೇಶ್ವರ ದೇವರಿಗೆ ಉಪ್ಪಿನಬೆಟಗೇರಿಯ ಶ್ರೀ ವಿರೂಪಾಕ್ಷ ಮಹಾಸ್ವಾಮೀಜಿ ಹಾಗೂ ಇನಾಮಹೊಂಗಲದ ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿ ಸಾನ್ನಿಧ್ಯದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ಹಾರೋಬೆಳವಡಿ ಹಾಗೂ ಸುತ್ತಲಿನ ಗ್ರಾಮಗಳ ಭಕ್ತರು ಭಾಗವಹಿಸಿದ್ದರು. ಶ್ರಾವಣ ಆರಂಭವಾದಾಗಿನಿ೦ದ ಪ್ರತಿದಿನ ಭಕ್ತರ ಮನೆಯಲ್ಲಿ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ನಾಡಿನ ಒಳಿತಿಗಾಗಿ ಹಗಲಿರುಳು ಭಜನಾ ಸಪ್ತಾಹ ನೆರವೇರಿಸಲಾಯಿತು.