filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 2621440;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 37; 
ಜಿಲ್ಲೆ

ಸೌಹಾರ್ದ, ಭಾವೈಕ್ಯ ಬೆಸೆಯುವ ಹಬ್ಬ ಮೊಹರಂ

ತಲ್ಲೂರ: ಪರಸ್ಪರ ಪ್ರೀತಿ, ವಿಶ್ವಾಸ, ಸೌಹಾರ್ದತೆ, ಸಾಮರಸ್ಯ ಹಾಗೂ ಭಾವೈಕ್ಯ ವೃದ್ಧಿಸುವಲ್ಲಿ ಮೊಹರಂ ಹಬ್ಬ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಸವದತ್ತಿ ಯಲ್ಲಮ್ಮ ದೇವಸ್ಥಾನ ವ್ಯವಸ್ಥಾಪನ ಸಮಿತಿ ಮಾಜಿ ಸದಸ್ಯ ಪುಂಡಲೀಕ ಮೇಟಿ ಹೇಳಿದರು.

ಸಮೀಪದ ಆಲದಕಟ್ಟಿ ಕೆ.ಎಂ ಗ್ರಾಮದಲ್ಲಿ ಮೊಹರಂ ಹಬ್ಬದ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ಪಂರ ದೇವರು ಹಾಗೂ ಡೋಲಿಗಳ ವಿಸರ್ಜನೆಯಲ್ಲಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಳೆದ 5 ದಿನಗಳಿಂದ ಗ್ರಾಮದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಪಂರ ಹಾಗೂ ಡೋಲಿ ದೇವರಿಗೆ ಭಕ್ತರು ಸಕ್ಕರೆ, ಉತ್ತತ್ತಿ ಸೇರಿ ವಿವಿಧ ಕಾಣಿಕೆ ಸಲ್ಲಿಸಿ ಸೇವೆ ಸಲ್ಲಿಸಿದರು. ಬಳಿಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಂರ ಹಾಗೂ ಡೋಲಿಗಳ ಮೆರವಣಿಗೆ ಮಾಡಲಾಯಿತು. ಸಂಜೆ ದೇವರನ್ನು ವಿಸರ್ಜಿಸಲಾಯಿತು. ಅಜೀಜ್​ಅಜ್ಜಾರ ನದಾಫ್​, ಎಸ್​.ಎಸ್​.ಮುಗಳಿ, ಬಸವರಾಜ ಹಳೇಮನಿ, ಸುರೇಶ ಮುಗಳಿ, ಯಲನಾಯ್ಕ ಸತ್ಯನಾಯ್ಕರ, ಗೌಡಪ್ಪ ಕಡಕೋಳ, ಈಶ್ವರ ಚೌಡಪ್ಪನವರ, ನೀಲಕಂಠ ಕನ್ನಪ್ಪನವರ, ಸಿದ್ದು ಜಗದಾಳ, ಪ್ರಕಾಶ ಚೌಡಪ್ಪನವರ, ಬಸಪ್ಪ ನೇಗಿನಾಳ ಇತರರಿದ್ದರು.