ಜಿಲ್ಲೆ

ಸಾಮರಸ್ಯಕ್ಕೆ ನೀಡಬೇಕು ಮನ್ನಣೆ

Davangere - Desk - Mahesh Babu E

ಚಳ್ಳಕೆರೆ: ಗಣೇಶ ಮತ್ತು ಈದ್ ಮಿಲಾದ್ ಹಬ್ಬ ಆಚರಣೆ ಸಮಾಜದ ಸಾಮರಸ್ಯ ಕಾಪಾಡಿಕೊಳ್ಳುವ ರೀತಿಯಲ್ಲಿ ಆಚರಿಸಬೇಕು ಎಂದು ಪೊಲೀಸ್ ಉಪ ಅಧೀಕ್ಷಕ ಟಿ.ಬಿ.ರಾಜಣ್ಣ ಹೇಳಿದರು.

ನಗರದ ಪೊಲೀಸ್ ಠಾಣಾ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದರು.

ಸಾಮಾಜಿಕ ಹೋರಾಟಗಾರ ಎಸ್.ಎಚ್.ಸೈಯದ್ ಮಾತನಾಡಿ, ಹಿಂದು-ಮುಸ್ಲಿಂ ಸಾಮರಸ್ಯ ಇರುವ ತಾಲೂಕು ನಮ್ಮದು. ನಾವೆಲ್ಲರೂ ಒಗ್ಗೂಡಿ ಹಬ್ಬ ಆಚರಿಸುತ್ತೇವೆ ಎಂದರು.

ವಿಶ್ವ ಹಿಂದು ಪರಿಷತ್ ತಾಲೂಕು ಅಧ್ಯಕ್ಷ ಡಾ.ಡಿ.ಎನ್.ಮಂಜುನಾಥ ಮಾತನಾಡಿ, ಬಿಇಒ ಕಚೇರಿ ಆವರಣದಲ್ಲಿ ಪರಿಷತ್ ವತಿಯಿಂದ 12 ದಿನ ಮಾತ್ರ ಮಹಾಗಣಪತಿ ಪ್ರತಿಷ್ಠಾಪನೆ ಮಾಡಲಾಗುವುದು ಎಂದು ಹೇಳಿದರು.

ಪೌರಾಯುಕ್ತ ಸಿ.ಚಂದ್ರಪ್ಪ ಮಾತನಾಡಿದರು. ವೃತ್ತ ನಿರೀಕ್ಷಕ ಕೆ. ಸಮೀವುಲ್ಲಾ, ನಗರ ಠಾಣಾ ಪಿಐ ರಾಜ ಫಕ್ರುದ್ದಿನ್ ದೇಸಾಯಿ, ಕೆಇಬಿ ಎಇಇ ರಾಜಣ್ಣ, ಪಿಎಸ್‌ಐ ಶಿವರಾಜ್, ಆರೋಗ್ಯ ನಿರೀಕ್ಷಕ ಎಚ್.ಮಹಾಲಿಂಗಪ್ಪ, ನಗರಸಭಾ ಸದಸ್ಯ ಹೊಯ್ಸಳ ಗೋವಿಂದ, ಮುಖಂಡರಾದ ಗಾಂಧಿನಗರ ಕೃಷ್ಣ, ಬಷೀರ್, ಅನ್ವರ್ ಮಾಸ್ಟರ್, ಡಿ. ಚಂದ್ರು ಇದ್ದರು.