ಬಗ್ಗೂರು ಗ್ರಾಮದಲ್ಲಿ ಏರ್ಪಡಿಸಿದ್ದ ಸುವರ್ಣ ಸಂಗೀತ ಕಾರ್ಯಕ್ರಮವನ್ನು ಹಿರಿಯ ರಂಗಕರ್ಮಿ ದೊಡ್ಡರಾಮರೆಡ್ಡಿ ಹಾರ್ಮೋನಿಯಂ ನುಡಿಸುವ ಮೂಲಕ ಚಾಲನೆ ನೀಡಿದರು. ಶ್ರೀ ರಾಮಲಿಂಗೇಶ್ವರ ಭಜನಾಟ್ರಸ್ಟ್ ಅಧ್ಯಕ್ಷ ಎನ್.ಡಿ.ಬಸವನಗೌಡ, ಹಿರಿಯ ಸಂಗೀತಗಾರರಾದ ಶಾಂತಮೂರ್ತಿಸ್ವಾಮಿ, ಅಯ್ಯಪ್ಪ ಸ್ವಾಮಿ ಮಠಪತಿ ಇದ್ದರು. 
ಜಿಲ್ಲೆ

ಸಾಮರಸ್ಯ ಕದಡುತ್ತಿದೆ ಸಾಮಾಜಿಕ ಜಾಲತಾಣ

ನರೇಶ್ ಕುಮಾರ್

ಸಿರಗುಪ್ಪ: ತತ್ವಪದ, ಭಕ್ತಿಗೀತೆ, ಭಾವಗೀತೆ, ಜಾನಪದ ಕಾರ್ಯಕ್ರಮಗಳು ಮನುಷ್ಯನಿಗೆ ಮನರಂಜನೆ ನೀಡುವುದರೊಂದಿಗೆ ಸಮಾಜದಲ್ಲಿ ಶಾಂತಿಯ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತವೆ ಎಂದು ಹಿರಿಯ ಸಾಹಿತಿ, ರಂಗಕರ್ಮಿ ಬಿ.ದೊಡ್ಡ ರಾಮರೆಡ್ಡಿ ಹೇಳಿದರು.

ಬಗ್ಗೂರು ಗ್ರಾಮದ ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶ್ರೀ ರಾಮಲಿಂಗೇಶ್ವರ ಭಜನಾ ಟ್ರಸ್ಟ್ ಏರ್ಪಡಿಸಿದ್ದ ಸುವರ್ಣ ಸಂಗೀತ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಾಮಾಜಿಕ ಜಾಲತಾಣಗಳು ಜನರ ಮಧ್ಯೆ ವಾಗ್ವಾದ, ಧಾರ್ಮಿಕ ಭೇದಭಾವ, ಕುಟುಂಬಗಳಲ್ಲಿ ಕಲಹ ಉಂಟು ಮಾಡುವುದರೊಂದಿಗೆ ಸಮಾಜದಲ್ಲಿ ಸಾಮರಸ್ಯ ಹಾಳುಮಾಡುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು. ಜಿ.ಎಂ.ರಾಮಲಿಂಗಪ್ಪ ಸುಗಮ ಸಂಗೀತ, ಆರ್.ಚನ್ನಮಲ್ಲಿಕಾರ್ಜುನ ಶಾಸ್ತ್ರೀಯ ಸಂಗೀತ, ಟಿ.ಎಚ್.ಎಂ.ಕೊಟ್ರಮ್ಮ ಕನ್ನಡಗೀತೆಗಳ ಗಾಯನ ಪ್ರಸ್ತುತಪಡಿಸಿದರು.

ಎಂ.ವಿಶ್ವಾಸ್ ತಬಲಾ ಸಾಥ್ ನೀಡಿದರು. ಟ್ರಸ್ಟ್ ಅಧ್ಯಕ್ಷ ಎನ್.ಡಿ.ಬಸವನಗೌಡ, ಹಿರಿಯ ಸಂಗೀತಗಾರರಾದ ಶಾಂತಮೂರ್ತಿಸ್ವಾಮಿ, ಅಯ್ಯಪ್ಪ ಸ್ವಾಮಿ ಮಠಪತಿ, ಕೆ.ಎಂ.ಬಸಯ್ಯಸ್ವಾಮಿ, ಚಂದ್ರಯ್ಯಸ್ವಾಮಿ ಇತರರಿದ್ದರು.