ಜಿಲ್ಲೆ

ಪ್ಲಾಸ್ಟಿಕ್ ಬಳಕೆಯಿಂದ ದುಷ್ಪರಿಣಾಮ

ಪ್ರಶಾಂತ ಹೂಗಾರ

ಚಿಕ್ಕೋಡಿ: ಪ್ಲಾಸ್ಟಿಕ್ ಬಳಕೆಯಿಂದ ಪರಿಸರದ ಮೇಲೆ ತೀವ್ರ ದುಷ್ಪರಿಣಾಮ ಬೀರುತ್ತಿದೆ ಎಂದು ಒಕ್ಕೂಟ ಅಧ್ಯಕ್ಷ ಮಹಾನಂದ ಮಗದುಮ್ಮ ಹೇಳಿದರು.

ನಾಯಿಂಗ್ಲಜ್ ಗ್ರಾಮದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಹಸಿಕಸ ಮತ್ತು ಒಣಕಸ ಪ್ಲಾಸ್ಟಿಕ್ ಡಸ್ಟ್‌ಬಿನ್  ವಿತರಿಸಲಾಯಿತು.ಮಹಾನಂದ ಮಗದುಮ್ಮ, ವಿದ್ಯಾ ಖೋತ, ವೆಶಾಲಿ ಕಮತೆ, ಮಲ್ಲಮ್ಮ ಅರಹುಣಸಿ ಇತರರಿದ್ದರು.

ತಾಲೂಕಿನ ನಾಯಿಂಗ್ಲಜ್ ಗ್ರಾಮದಲ್ಲಿ ಚಿಕ್ಕೋಡಿಯ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಹಾಗೂ ಗ್ರಾಪಂ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಹಸಿಕಸ, ಒಣಕಸ ವಿಂಗಡಣೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಜ್ಞಾನ ವಿಕಾಸ ಕೇಂದ್ರದ ಅಧ್ಯಕ್ಷ ವಿದ್ಯಾ ಖೋತ ಮಾತನಾಡಿದರು. ಗ್ರಾಪಂ ಸದಸ್ಯರಾದ ವೈಶಾಲಿ ಕಮತೆ ಹಾಗೂ ಮಾಲಾಶ್ರೀ ಖೋತ ಗ್ರಾಪಂನಿಂದ ಹಸಿಕಸ ಒಣಕಸ ಡಸ್ಟ್‌ಬಿನ್, ತುಳಸಿ ಸಸಿ ಮತ್ತು ತುಳಸಿಕಟ್ಟೆಯನ್ನು ಜ್ಞಾನ ವಿಕಾಸ ಕೇಂದ್ರದ ಸದಸ್ಯರಿಗೆ ವಿತರಿಸಿದರು.

ಪಿಡಿಒ ಶಿವಾನಂದ ದೇಸಾಯಿ, ಗ್ರಾಮಲೆಕ್ಕಾಕಾರಿ ಸುಶ್ಮಿತಾ ಜೈನಾಪುರ, ಮಲ್ಲಮ್ಮ ಅರಹುಣಸಿ, ಮಂಗಲ ಪಾಟೀಲ, ಸವಿತಾ ಕೋಟಗಿ, ಆಯಿಷಾ ಸುತಾರ ಇದ್ದರು.