ಜಿಲ್ಲೆ

ಹಾನಗಲ್ಲ ಗ್ಯಾಂಗ್ ರೇಪ್ ಪ್ರಕರಣ; ೧೦ ಜನ ಆರೋಪಿಗಳಿಗೆ ಷರತ್ತು ಬದ್ಧ ಜಾಮೀನು ಮಂಜೂರು

Haveri - Kariyappa Aralikatti

ಹಾವೇರಿ: ಇಡೀ ರಾಜ್ಯವೇ ಬೆಚ್ಚಿ ಬೀಳುವಂತೆ ಮಾಡಿದ್ದ ಹಾನಗಲ್ಲ ಗ್ಯಾಂಗ್ ರೇಪ್ ಪ್ರಕರಣದ ೧೦ ಜನ ಆರೋಪಿತರಿಗೆ ನ್ಯಾಯÁಲಯವು ಷರತ್ತು ಬದ್ಧ ಜಾಮೀನು ನೀಡಿದೆ.

ಸಾಮೂಹಿಕ ಅತ್ಯಾಚಾರಕ್ಕೆ ಸಂಬAಽಸಿದAತೆ ೭ ಪ್ರಮುಖ ಆರೋಪಿಗಳು ಸೇರಿ ಒಟ್ಟು ೧೯ ಆರೋಪಿಗಳನ್ನು ಹಾನಗಲ್ಲ ಪೊಲೀಸರು ಬಂಽಸಿದ್ದರು. ಈ ಪೈಕಿ ಹೈಕೋರ್ಟ್ ನೀಡಿದ ತೀರ್ಪಿನ ಮೇರೆಗೆ ಹಾವೇರಿ ಸಬ್ ಜೈಲಿನಿಂದ ೧೦ ಜನ ಆರೋಪಿಗಳನ್ನು ಷರತ್ತು ಬದ್ಧ ಜಾಮೀನಿನ ಮೇಲೆ ಬಿಡುಗಡೆ ಮÁಡಲಾಗಿದೆ.

ಜಾಮೀನು ಪಡೆದ ೧೦ ಆರೋಪಿಗಳು ಸಾಮೂಹಿಕ ಅತ್ಯಾಚಾರ ಸಂತ್ರಸ್ತೆಯ ಮೇಲೆ ಹಲ್ಲೆ, ಅಪಹರಣ, ಅತಿಕ್ರಮ ಪ್ರವೇಶ ಮತ್ತು ಹತ್ಯೆಗೆ ಯತ್ನಿಸಿದ ಆರೋಪಗಳನ್ನು ಎದುರಿಸುತ್ತಿರುವ ಕಾರಣ ಅವರಿಗೆ ಜಾಮೀನು ನೀಡಲಾಗಿದೆ. ಕಳೆದ ಜ. ೮ರಂದು ನಡೆದ ಪ್ರಕರಣದಲ್ಲಿ ಸಂತ್ರಸ್ತೆಯ ಮೇಲೆ ಆರೋಪಿಗಳು ಅತ್ಯಾಚಾರ ಮÁಡಿಲ್ಲ. ಆದರೆ, ಅವರು ಅಪರಾಧ ಮÁಡಲು ಬೆಂಬಲಿಸಿದ್ದಾರೆ ಎಂದು ಪೊಲೀಸರು ಮÁ. ೫ರಂದು ನ್ಯಾಯಾಲಯಕ್ಕೆ ಸಲ್ಲಿಸಿದ ರೋಷಾರೋಪ ಪಟ್ಟಿಯಲ್ಲಿ ತಿಳಿಸಿದ್ದರು ಎನ್ನಲಾಗಿದೆ.

೯ ಜನರಿಗೆ ಜೈಲೂಟವೇ ಗತಿ...

ಸಾಮೂಹಿಕ ಅತ್ಯಾಚಾರದ ಪ್ರಮುಖ ಆರೋಪಿಗಳಲ್ಲಿ ಅ-Á್ತಬ್ ಚಂದನಕಟ್ಟೆ (ಎ೧), ಮದರಸಾಬ್ ಮಂಡಕ್ಕಿ (ಎ೨) ಸೇರಿ ೭ ಜನ ಪ್ರಮುಖ ಆರೋಪಿಗಳು ಹಾಗೂ ಇನ್ನೂ ಇಬ್ಬರು ಸೇರಿ ಒಟ್ಟು ೯ ಆರೋಪಿಗಳು ಜೈಲಿನಲ್ಲಿದ್ದಾರೆ ಎಂದು ಪೊಲೀಸ್ ಮೂಲದಿಂದ ತಿಳಿದು ಬಂದಿದೆ.