ಸಿದ್ದಾಪುರ: ತಾಲೂಕಿನ ಶ್ರೀಮನ್ನೆಲೆಮಾವು ಮಠದಲ್ಲಿ ರಾಮನವಮಿ ಪ್ರಯುಕ್ತ ಏ. 6ರಂದು ಭಜನೆ, ಹರಿಕೀರ್ತನೆ ಹಾಗೂ ದೀಪೋತ್ಸವ ನಡೆಯಲಿದೆ.
ಮಧ್ಯಾಹ್ನ 3 ಗಂಟೆಯಿಂದ ಶ್ರೀಮನ್ನಲೆಮಾವು ಮಠದ ಮಠಾಧೀಶರಾದ ಶ್ರೀ ಮಾಧವಾನಂದ ಭಾರತೀ ಮಹಾಸ್ವಾಮಿಗಳ ಅನುಗ್ರಹದಿಂದ ಲಕ್ಷ್ಮೀ ನೃಸಿಂಹ ಸಂಸ್ಕೃತಿ ಸಂಪದ ವೇದಿಕೆಯಲ್ಲಿ ಸೀಮೆಯ ಎಲ್ಲ ಭಜನಾ ಮಂಡಳಿಗಳಿಂದ ಭಜನೆ 4.30ರಿಂದ ಪ್ರಿಯಾಂಕಾ ಹೆಗಡೆ ಶಿರಸಿ ಅವರಿಂದ ಶ್ರೀರಾಮ ಜನ್ಮ ಎಂಬ ಹರಿಕೀರ್ತನೆ ನಡೆಯಲಿದೆ.
ಸಂಜೆ 6.30ರ ನಂತರ 4 ಸಾವಿರಕ್ಕಿಂತಲೂ ಅಧಿಕ ಹಣತೆಗಳಿಂದ ಜ್ಯೋತಿ ಬೆಳಗುವ ಮೂಲಕ ರಾಮೋತ್ಸವ (ದೀಪೋತ್ಸವ) ನಡೆಸಲಾಗುವುದು ಎಂದು ಮಠದ ಪ್ರಕಟಣೆ ತಿಳಿಸಿದೆ.