ಹರಿಹರ: ನಗರದ ಎಸ್‌ಜೆವಿಪಿ ಪಾಲಿಟೆಕ್ನಿಕ್‌ನಲ್ಲಿ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಹರಿಹರ ತಾಲೂಕು ಘಟಕದಿಂದ ಆ. 1ರಂದು ಬೆಳಗ್ಗೆ 10ಕ್ಕೆ ಶೈಕ್ಷಣಿಕ ಕಾರ್ಯಾಗಾರ ಮತ್ತು ಶೇ. 100ರಷ್ಟು ಫಲಿತಾಂಶ ಪಡೆದ ಶಾಲೆಗಳ ಶಿಕ್ಷಕರಿಗೆ ಸನ್ಮಾನ ಹಾಗೂ ಸದಸ್ಯರ ವಾರ್ಷಿಕ ಮಹಾಸಭೆ ಆಯೋಜಿಸಲಾಗಿದೆ.
ಶಾಸಕ ಬಿ.ಪಿ.ಹರೀಶ್ ಉದ್ಘಾಟಿಸುವರು. ವಿಧಾನ ಪರಿಷತ್ತಿನ ಸದಸ್ಯರಾದ ವೈ.ಎ.ನಾರಾಯಣಸ್ವಾಮಿ, ಎಂ.ಚಿದಾನಂದಗೌಡ ಶಿಕ್ಷಕರನ್ನು ಸನ್ಮಾನಿಸುವರು. ತಾಲೂಕು ಘಟಕದ ಅಧ್ಯಕ್ಷ ಈಶಪ್ಪ ಬೂದಿಹಾಳ್ ಅಧ್ಯಕ್ಷತೆ ವಹಿಸುವರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕರಾದ ಜಿ.ಆರ್.ತಿಪ್ಪೇಶಪ್ಪ, ಎಸ್.ಗೀತಾ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಹನುಮಂತಪ್ಪ, ಎಸ್‌ಜೆಪಿವಿವಿ ಪೀಠದ ಕಾರ್ಯದರ್ಶಿ ಆರ್.ಟಿ.ಪ್ರಶಾಂತ್ ದುಗ್ಗತ್ತಿಮಠ, ಮಾಧ್ಯಮಿಕ ಶಾಲಾ ಶಿಕ್ಷಕರ ಸಂಘದ ಎಸ್.ಕೃಷ್ಣಮೂರ್ತಿ ಶ್ರೇಷ್ಠಿ ಇತರರು ಭಾಗವಹಿಸುವರು.