ಜಿಲ್ಲೆ

ನಕಾರಾತ್ಮಕ ಭಾವನೆಯೇ ಆತ್ಮಹತ್ಯೆಗೆ ಕಾರಣ

Davangere - Desk - Basavaraja P

ವೈದ್ಯಾಧಿಕಾರಿ ಡಾ.ಕಲ್ಲೇಶ್ ಅಭಿಪ್ರಾಯ I ಹರಿಹರದಲ್ಲಿ ದಿನಾಚರಣೆ

ಹರಿಹರ: ನಕಾರಾತ್ಮಕ ಭಾವನೆ ಬಿಟ್ಟು ಸಕಾರಾತ್ಮಕ ಚಿಂತನೆ ಮಾಡಿದಾಗ ಆತ್ಮಹತ್ಯೆ ನಿರ್ಧಾರದಿಂದ ಹೊರ ಬರಬಹುದು ಎಂದು ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಕಲ್ಲೇಶ್ ಅಭಿಪ್ರಾಯ ಪಟ್ಟರು.

ನಗರದ ಸಂತ ಅಲೋಸಿಯಸ್ ಇಂಟರ್‌ನ್ಯಾಷನಲ್ ಶಾಲೆ ಮತ್ತು ಪದವಿಪೂರ್ವ ಕಾಲೇಜಿನಲ್ಲಿ ಬುಧವಾರ ತಾಲೂಕು ಆರೋಗ್ಯ ಇಲಾಖೆ ಹಮ್ಮಿಕೊಂಡಿದ್ದ ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.

ಆತ್ಮಹತ್ಯೆಗೂ ಸಾಮಾನ್ಯ ಸಾವಿಗೂ ವ್ಯತ್ಯಾಸವಿದೆ. ಆತ್ಮಹತ್ಯೆ ಹಠಾತ್ತನೇ ತೆಗೆದುಕೊಳ್ಳುವ ಒಂದು ತಪ್ಪು ನಿರ್ಧಾರ. ಸಾಮಾನ್ಯ ಸಾವು ರೋಗಗಳಿಂದ ಅಥವಾ ವೃದ್ಧಾಪ್ಯದಿಂದ ಸಂಭವಿಸುವ ಸಾವಾಗಿದೆ. ವಿದ್ಯಾರ್ಥಿಗಳೇ ಹಠಾತ್ತನೇ ನಿರ್ಧಾರ ತೆಗೆದುಕೊಳ್ಳಬಾರದು. ಧೈರ್ಯದಿಂದ ಜೀವನ ಎದುರಿಸಿ ಎಂದು ಸಲಹೆ ನೀಡಿದರು.

ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಉಮ್ಮಣ್ಣ ಮಾತನಾಡಿ, ಆತ್ಮಹತ್ಯೆ ಕೃತಕ ಸಾವಲ್ಲ, ಸಾವನ್ನು ನಾವೇ ತಂದುಕೊಳ್ಳುವುದು. ಆತ್ಮಹತ್ಯೆಯ ಯೋಚನೆ, ಚಿಂತೆ ಬಿಡಿ. ಕ್ರೀಡೆಯಲ್ಲಿ ಭಾಗವಹಿಸಿ ಇತರೊಂದಿಗೆ ಪ್ರೀತಿಯಿಂದ ನಡೆದುಕೊಳ್ಳಿ ಎಂದರು.

ತಾಲೂಕು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ನಾಗರಾಜ್ ಮಾತನಾಡಿ, ಆಯ್ಕೆ ಹೆಚ್ಚಾದಂತೆ ಒತ್ತಡವೂ ಹೆಚ್ಚಾಗುತ್ತ ಹೋಗುತ್ತವೆ. ಓದಿನತ್ತ ಗಮನ ಕಡಿಮೆಯಾಗಿ, ಕ್ರಿಯಾಶೀಲತೆಯಿಂದ ಹೊರಗುಳಿಯುತ್ತಾರೆ. ಇದರಿಂದ ಜುಗುಪ್ಸೆಗೆ ಒಳಗಾಗುತ್ತಾರೆ. ಇಂಥ ಒತ್ತಡಗಳಿಂದ 15ರಿಂದ 24 ವಯೋಮಾನದ ಯುವಕರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂದು ಬೇಸರಪಟ್ಟರು.

ಪ್ರಾಚಾರ್ಯ ಪುಷ್ಪಲತಾ ಅಧ್ಯಕ್ಷತೆ ವಹಿಸಿದ್ದರು. ದೈಹಿಕ ವಿಷಯ ಶಿಕ್ಷಕ ಮಂಜುನಾಥ್, ಆರೋಗ್ಯ ಇಲಾಖೆ, ಸಂಸ್ಥೆಯ ಸಿಬ್ಬಂದಿ ವಿದ್ಯಾರ್ಥಿಗಳು