ಹರಿಹರ: ಹಳೇ ಪಿಂಚಣಿ ಪದ್ಧತಿ ಜಾರಿಗೆ ಆಗ್ರಹಿಸಿ ಎನ್‌ಪಿಎಸ್ ನೌಕರರ ತಾಲೂಕು ಘಟಕದ ಪದಾಧಿಕಾರಿಗಳು ತಹಸೀಲ್ದಾರ್ ಗುರುಬಸವರಾಜ್ ಮೂಲಕ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮನವಿ ಸಲ್ಲಿಸಿದರು.
ಸೆ. 19 ರಂದು ನವದೆಹಲಿಯಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸರ್ಕಾರಿ ಎನ್‌ಪಿಎಸ್ ನೌಕರರ ಸಂಘಟನೆಗಳು ಹಳೇ ಪಿಂಚಣಿ ಯೋಜನೆ ಜಾರಿಗೆ ಹೋರಾಟ ಮಾಡಲು ತೀರ್ಮಾನಿಸಲಾಗಿದೆ.
ಎನ್‌ಪಿಎಸ್ ನೌಕರರಿಗೆ ನಿವೃತ್ತಿ ನಂತರ ಯಾವುದೇ ನಿಗದಿತ ಭದ್ರತೆ ಒದಗಿಸುವ ಅಂಶಗಳನ್ನು ಹೊಂದಿರುವುದಿಲ್ಲ. ಚುನಾವಣೆ ವೇಳೆ ರಾಜಕೀಯ ಪಕ್ಷಗಳು ಒಪಿಎಸ್ ಜಾರಿಗೊಳಿಸುವುದಾಗಿ ಪ್ರಣಾಳಿಕೆಯಲ್ಲಿ ಸೇರ್ಪಡೆ ಮಾಡಿದ್ದರೂ ಕೇವಲ ಸಮಿತಿ ರಚನೆ ಆಗಿದೆಯೇ ಹೊರತು ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎನ್‌ಪಿಎಸ್ ಮತ್ತು ಯುಪಿಎಸ್ ಹಿಂಪಡೆದು ಮೊದಲಿನಂತೆ ಹಳೇ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಲು ಆಗ್ರಹಿಸಿದರು.
ಸಂಘದ ಅಧ್ಯಕ್ಷ ಸಿದ್ದಪ್ಪ ಸಂಗಣ್ಣ, ಕಾರ್ಯದರ್ಶಿ ಎ.ಸಿ.ಶಿವರಾಜ್, ರವಿಕುಮಾರ್, ಕೆ.ಟಿ.ಮಂಜಪ್ಪ, ತಿಪ್ಪೇಶ್ ರೆಡ್ಡಿ, ದೇವರಾಜ್, ಗುರುಸ್ವಾಮಿ, ಶರತ್‌ಬಾಬು, ಬಿ.ಎಚ್.ಶಿವಕುಮಾರ್, ಕೆ.ಅಮಿತ್‌ಕುಮಾರ್, ಗೋಪಿನಾಥ್, ಆದರ್ಶ, ರವಿಕುಮಾರ್ ಭೂಮೇಶ್, ರಂಗಪ್ಪ, ದ್ವಾರಕೀಶ್ ಗೋಪಾಲ್ ಇತರರಿದ್ದರು.