ಹರಿಹರದ ಮಿನಿ ವಿಧಾನಸೌಧದಲ್ಲಿ ಗುರುವಾರ ಮಹರ್ಷಿ ಭಗೀರಥ ಜಯಂತಿ ಆಚರಿಸಲಾಯಿತು. ತಹಸೀಲ್ದಾರ್ ಕೆ.ಬಿ. ರಾಮಚಂದ್ರಪ್ಪ, ಡಾ. ಚಂದ್ರಮೋಹನ್, ಪೌರಾಯುಕ್ತೆ ಎಸ್.ಲಕ್ಷ್ಮಿ, ಮಹೇಶ್ ಕೋಡಬಾಳ್ ಇತರರಿದ್ದರು. 
ಜಿಲ್ಲೆ

ಭಗೀರಥ ಪ್ರಯತ್ನದಿಂದ ಸಾಧನೆ ಸಾಧ್ಯ

Davanagere

ಹರಿಹರ: ಜೀವನದಲ್ಲಿ ಏನನ್ನಾದರೂ ಸಾಧಿಸಬೇಕಾದರೆ ಭಗೀರಥ ಪ್ರಯತ್ನ ಮಾಡಬೇಕು ಎಂದು ತಹಸೀಲ್ದಾರ್ ಕೆ.ಬಿ. ರಾಮಚಂದ್ರಪ್ಪ ಹೇಳಿದರು.

ನಗರದ ಮಿನಿ ವಿಧಾನಸೌಧದಲ್ಲಿ ಗುರುವಾರ ಆಯೋಜಿಸಿದ್ದ ಮಹರ್ಷಿ ಭಗೀರಥ ಜಯಂತ್ಯುತ್ಸವದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.

ಸತತ ಪ್ರಯತ್ನಕ್ಕೆ ಪ್ರತಿಫಲ ಸಿಗಲಿದೆ ಎನ್ನುವುದಕ್ಕೆ ದೇವಲೋಕದಿಂದ ಗಂಗೆಯನ್ನು ಧರೆಗಿಳಿಸಿದ ಭಗೀರಥ ಮಹರ್ಷಿಯೇ ಉತ್ತಮ ಉದಾಹರಣೆ ಎಂದರು.

ಪ್ರತಿಯೊಬ್ಬರೂ ತಮ್ಮ ತಮ್ಮ ಕ್ಷೇತ್ರಗಳಲ್ಲಿ ನಿಷ್ಠೆಯಿಂದ ಕೆಲಸ ಮಾಡಿದರೆ ದೇಶ ಅಭಿವೃದ್ಧಿಯಾಗುತ್ತದೆ. ರೈತರು, ಅಧಿಕಾರಿಗಳು ಸೇರಿ ಸಮಾಜದ ಎಲ್ಲ ವರ್ಗದ ಜನರು ಶ್ರದ್ಧೆಯಿಂದ ಕೆಲಸ ನಿರ್ವಹಿಸಬೇಕಾಗಿದೆ ಎಂದರು.

ಟಿಎಚ್‌ಒ ಡಾ.ಚಂದ್ರಮೋಹನ್, ತಾಪಂ ಇಒ ಲಕ್ಷ್ಮೀಪತಿ, ನಗರಸಭೆ ಪೌರಾಯುಕ್ಷೆ ಎಸ್. ಲಕ್ಷ್ಮಿ, ನಗರಸಭೆ ಪರಿಸರ ಅಭಿಯಂತರ ಮಹೇಶ್ ಕೊಡಬಾಳ್, ಆಹಾರ ನಿರೀಕ್ಷಕರಾದ ಬಸವರಾಜ್, ಶಿರಸ್ತೇದಾರ್ ಚನ್ನವೀರಪ್ಪ, ಸಿಬ್ಬಂದಿಗಳಾದ ಸಂಗೀತ, ವೀಣಾ, ಸೌಮ್ಯಾ, ಭಾರತಿ, ಸುವರ್ಣ, ಸಂತೋಷ್, ಉಮೇಶ್, ಪ್ರಶಾಂತ್, ಫೈರೋಜ್ ಇತರರಿದ್ದರು.