ಹರಿಹರ: ನಗರದ ಸೇಂಟ್ ಅಲೋಶಿಯಸ್ ಕಾಲೇಜಿನಲ್ಲಿ ಈಚೆಗೆ ಆಯೋಜಿಸಿದ್ದ ಪದವಿಪೂರ್ವ ಕಾಲೇಜುಗಳ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಬಾಲಕಿಯರ ವಿಭಾಗದಲ್ಲಿ ಶ್ರೀಮತಿ ಗಿರಿಯಮ್ಮ ಕಾಂತಪ್ಪ ಶ್ರೇಷ್ಠಿ ಮಹಿಳಾ ಪಿಯು ಕಾಲೇಜು ಸತತ ಮೂರನೇ ಬಾರಿ ಚಾಂಪಿಯನ್‌ಶಿಪ್ ಮುಡಿಗೇರಿಸಿಕೊಂಡಿದೆ.
ಗುಂಪು ಕ್ರೀಡೆಗಳಾದ ಶಟಲ್ ಬ್ಯಾಟ್‌ಮಿಂಟನ್, ಟೆನಿಕಾಯ್ಟ, ವಾಲಿಬಾಲ್, ಖೋ ಖೋ ಮತ್ತು ಹ್ಯಾಂಡ್‌ಬಾಲ್‌ನಲ್ಲಿ ಪ್ರಥಮ, ಫುಟ್‌ಬಾಲ್‌ನಲ್ಲಿ ದ್ವಿತೀಯ, ಚೆಸ್‌ನಲ್ಲಿ ವಿದ್ಯಾರ್ಥಿನಿಯರು ತೃತೀಯ ಸ್ಥಾನ ಪಡೆದಿದ್ದಾರೆ.
100 ಮೀಟರ್ ಓಟದಲ್ಲಿ ಪ್ರಥಮ ಮತ್ತು ದ್ವಿತೀಯ, 200 ಮೀ. ಓಟದಲ್ಲಿ ತೃತೀಯ, 800 ಮೀ. ಓಟದಲ್ಲಿ ದ್ವಿತೀಯ ಮತ್ತು ತೃತೀಯ, 3000 ಮೀ. ಓಟದಲ್ಲಿ ತೃತೀಯ, 3000 ಮೀ. ವಾಕ್‌ರೇಸ್‌ನಲ್ಲಿ ಪ್ರಥಮ ಮತ್ತು ತೃತೀಯ.
4100 ಮೀ. ರಿಲೇನಲ್ಲಿ ಪ್ರಥಮ, 4400 ಮೀ. ರಿಲೇನಲ್ಲಿ ದ್ವಿತೀಯ, ಗುಂಡು ಎಸೆತದಲ್ಲಿ ಪ್ರಥಮ, ಉದ್ದ ಜಿಗಿತದಲ್ಲಿ ದ್ವಿತೀಯ ಮತ್ತು ತೃತೀಯ, ಎತ್ತರ ಜಿಗಿತದಲ್ಲಿ ದ್ವಿತೀಯ, ತ್ರಿವಿಧ ಜಿಗಿತ, ಜಾವೆಲಿನ್ ಮತ್ತು ಹ್ಯಾಮರ್ ಎಸೆತದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ ಎಂದು ಕ್ರೀಡಾ ಕಾರ್ಯದರ್ಶಿ ಸೈಯದ್ ಇದ್ರೂಸ್ ತಿಳಿಸಿದ್ದಾರೆ.
ವಿದ್ಯಾರ್ಥಿನಿಯರ ಸಾಧನೆಗೆ ಪ್ರಾಚಾರ್ಯೆ ಟಿ.ಡಿ. ಸುಜಾತಾ, ಸಂಸ್ಥೆಯ ಅಧ್ಯಕ್ಷ ಜಿ.ಎಂ.ತಿಪ್ಪೇಸ್ವಾಮಿ, ಕಾರ್ಯದರ್ಶಿ ಎಸ್.ಪ್ರಸನ್ನಕುಮಾರ್, ನಿರ್ದೇಶಕರಾದ ಆರ್.ವಿ.ಬಲರಾಮ್ ಶ್ರೇಷ್ಠಿ, ಎಂ.ಆರ್.ಸತ್ಯನಾರಾಯಣ, ರವಿಕುಮಾರ್ ಅಭಿನಂದಿಸಿದ್ದಾರೆ.