ಜಿಲ್ಲೆ

ಬದುಕಿನ ವಿಶೇಷಣಗಳಿಗೆ ನೀಡಿ ಬರಹ ರೂಪ

Davanagere

ಹರಿಹರ: ನಮ್ಮ ಸುತ್ತಮುತ್ತಲ ವಿಶೇಷತೆಗಳನ್ನು ಅವಲೋಕಿಸಿ ಅಕ್ಷರ ರೂಪ ನೀಡಿದರೆ ಪ್ರತಿಯೊಬ್ಬರಲ್ಲೂ ಅಡಗಿರುವ ಬರಹ ಕಲೆಗೆ ವೇದಿಕೆ ಸಿಗುತ್ತದೆ ಎಂದು ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಹೊರಪೇಟೆ ಮಲ್ಲೇಶಪ್ಪ ಹೇಳಿದರು.

ತಾಲೂಕಿನ ಹಾಲಿವಾಣ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಶಾಲೆಯ ಹಳೆ ವಿದ್ಯಾರ್ಥಿ ಹಾಗೂ ಶಿಕ್ಷಕ ಟಿ.ಶಿವಕುಮಾರ ರಚಿತ ಭುವಿಯ ಮೇಲಿನ ಬದುಕು ಪುಸ್ತಕ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ದೊಡ್ಡ ಬರಹಗಾರರು ನಮ್ಮಂತೆಯೆ ಸಾಮಾನ್ಯರಾಗಿದ್ದರು. ಸಣ್ಣ ಬರಹಗಳನ್ನು ಬರೆಯುತ್ತಾ ದೊಡ್ಡ ಸಾಹಿತಿಗಳಾಗಿ ಹೊರಹೊಮ್ಮಿದರು ಎಂದರು.

ಬಿಇಒ ಯು.ಬಸವರಾಜಪ್ಪ ಮಾತನಾಡಿ, ಸಮಾಜದ ಸ್ವಾಸ್ಥೃ ಕಾಪಾಡುವಲ್ಲಿ ಹಾಗೂ ಈಗಿನ ಜನಜೀವನ ಮುಂದಿನವರಿಗೆ ತಲುಪಿಸುವಲ್ಲಿ ಪುಸ್ತಕಗಳ ಪಾತ್ರ ಮಹತ್ವದು ಎಂದರು.

ಪತ್ರಕರ್ತ ಲೋಕೇಶ್ ಕೊಪ್ಪದ್ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು. ಪತ್ರಕರ್ತ ಸುರೇಶ್ ರಾಜೇನವರ್ ಕೃತಿ ಪರಿಚಯಿಸಿದರು. ಲೇಖಕ ಟಿ.ಶಿವಕುಮಾರ್, ಮುಖ್ಯ ಶಿಕ್ಷಕ ಕಸಾಪ ಮಾಜಿ ಜಿಲ್ಲಾಧ್ಯಕ್ಷ ಎಸ್.ಎಚ್.ಹೂಗಾರ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ದೊಡ್ಡ ವೀರಾಚಾರ್ ಅಧ್ಯಕ್ಷತೆ ವಹಿಸಿದ್ದರು.