ಹರಿಹರ: ಶರನ್ನವರಾತ್ರಿ ದಸರಾ ಹಬ್ಬದ ಪ್ರಯುಕ್ತ ನಗರದ ಶ್ರೀ ಏಕನಾಥೇಶ್ವರಿ ದೇವಸ್ಥಾನದಲ್ಲಿ ಅಮ್ಮನವರಿಗೆ ಅ. 3ರಿಂದ 12ರ ವರೆಗೆ 10 ದಿನಗಳ ಕಾಲ ವಿಶೇಷ ಅಲಂಕಾರ ಮತ್ತು ಪೂಜೆ ಹಮ್ಮಿಕೊಳ್ಳಲಾಗಿದೆ ಎಂದು ದೇವಸ್ಥಾನ ಸಮಿತಿಯ ಕೆ.ಬಿ.ಗಿರೀಶ್ ತಿಳಿಸಿದ್ದಾರೆ.
ಅ. 3ಕ್ಕೆ ಶ್ರೀ ಹೊರನಾಡು ಅನ್ನಪೂಣೇಶ್ವರಿ, 4ಕ್ಕೆ ಶ್ರೀ ತುಳಜಾ ಭವಾನಿ, 5ಕ್ಕೆ ಶ್ರೀ ಕೊಲ್ಲೂರು ಮೂಕಾಂಬಿಕೆ, 6ಕ್ಕೆ ಶ್ರೀ ಹುಲಿಗೆಮ್ಮ, 7ಕ್ಕೆ ಶ್ರೀ ಬಾದಾಮಿ ಬನಶಂಕರಿ, 8ಕ್ಕೆ ಶ್ರೀ ಉಚ್ಚೆಂಗಮ್ಮ, 9ಕ್ಕೆ ಶ್ರೀ ಏಕನಾಥೇಶ್ವರಿ, 10ಕ್ಕೆ ಶ್ರೀ ಸರಸ್ವತಿ, 11ಕ್ಕೆ ಶ್ರೀ ರೇಣುಕಾ ಯಲ್ಲಮ್ಮ, 12ಕ್ಕೆ ಶ್ರೀ ಚಾಮುಂಡೇಶ್ವರಿ ದೇವಿಯ ಅಲಂಕಾರ ಮಾಡಲಾಗುವುದು.
ನಿತ್ಯ ಬೆಳಗ್ಗೆ 5ರಿಂದ 8.30ರವರೆಗೆ ಅಭಿಷೇಕ ಸಂಕಲ್ಪ ಮಹಾ ಮಂಗಳಾರತಿ, ಹರಿಹರ ವಿವಿಧ ಮಹಿಳಾ ಮಂಡಳಿಯವರಿಂದ ಸಾಯಂಕಾಲ 7ಕ್ಕೆ ಲಲಿತಾ ಸಹಸ್ರನಾಮ ಹಾಗೂ ಭಜನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಏಕನಾಥೇಶ್ವರಿ ಅಮ್ಮನವರಿಗೆ ಪೂಜೆ ಸಲ್ಲಿಸುವ ಇಚ್ಛೆಯುಳ್ಳ ಭಕ್ತರು ಹೆಸರನ್ನು ದೇವಸ್ಥಾನದಲ್ಲಿ ಖುದ್ದಾಗಿ ಬಂದು ಸೇವೆಯ ದಿನಾಂಕವನ್ನು ನೋಂದಾಯಿಸಬಹುದು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ: 9886514607, 6360334976ಕ್ಕೆ ಸಂಪರ್ಕಿಸಲು ಪ್ರಕಟಣೆಯಲ್ಲಿ ಕೋರಿದ್ದಾರೆ.