ಹರಿಹರ: ಶ್ರೀನಗರದಲ್ಲಿ ಮೇ 22ರಿಂದ 26 ರ ವರೆಗೆ ನಡೆದ 45ನೇ ರಾಷ್ಟ್ರೀಯ ಪಂಜಾ ಕುಸ್ತಿ (ಆರ್ಮ್ ರೆಸಲಿಂಗ್) ಸ್ಪರ್ಧೆಯಲ್ಲಿ ನಗರದ ಬ್ರದರ್ ಜಿಮ್‌ನ ಕ್ರೀಡಾಪಟುಗಳು 16 ಪದಕಗಳನ್ನು ಗೆದ್ದಿದ್ದಾರೆ.
ಈ ಸ್ಪರ್ಧೆಗಳಲ್ಲಿ 21 ರಾಜ್ಯಗಳಿಂದ ಒಟ್ಟು 850 ಸ್ಪರ್ಧಾಳುಗಳು ಭಾಗವಹಿಸಿದ್ದರು.
ಬ್ರದರ್ ಜಿಮ್‌ನಿಂದ ಭಾಗವಹಿಸಿದ್ದ 30 ಕ್ರೀಡಾಪಟುಗಳು 4 ಚಿನ್ನ, 7 ಬೆಳ್ಳಿ ಪದಕ, 5 ಕಂಚಿನ ಪದಕ ಸೇರಿದಂತೆ 16 ಪದಕಗಳನ್ನು ಗೆದ್ದಿದ್ದಾರೆ.
ಕ್ರೀಡಾಪಟು ಕೆಂಚಪ್ಪ ಕೆ.ಎ. (ಎರಡು ಚಿನ್ನ), ಇರ್ಫಾನ್, ಸತೀಶ್ ಎಸ್., ಯಶ್ವಂತ್ ಎಚ್.ಎಚ್., ಅಬ್ದುಲ್ ರೆಹಮಾನ್, ಜಾಫರ್, ದೀಪ್ತಿ ಎಂ., ಚಂದ್ರಶೇಖರ್ ನಾಯ್ಕ ಆರ್., ಪುರುಷೋತ್ತಮ ಮತ್ತಿತರರು ಪದಕ ಗೆದ್ದಿದ್ದಾರೆ.
ಇವರಲ್ಲಿ ನಾಲ್ವರು ಕ್ರೀಡಾಪಟುಗಳು ಅಂತಾರಾಷ್ಟ್ರೀಯ ಪಂಜಾ ಕುಸ್ತಿ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಕ್ರೀಡಾಪಟುಗಳ ಸಾಧನೆಗೆ ಜಿಮ್‌ನ ಸಂಚಾಲಕ ಅಕ್ರಂ ಬಾಷಾ, ತರಬೇತುದಾರ ಮೊಹಮ್ಮದ್ ರಫೀಕ್ ಅಭಿನಂದಿದ್ದಾರೆ.