ಜಿಲ್ಲೆ

ನಾಳೆ ಹರಿದಾಸರ ಕೃತಿ ಕೀರ್ತನೆ ಗಾಯನ ಕಾರ್ಯಕ್ರಮ

Mangaluru - Shravan Kumar Nala

ಮಂಗಳೂರು: ಶ್ರೀಶಾ ಸೌಹಾರ್ದ ಸೊಸೈಟಿಯ ಪ್ರಾಯೋಜಕತ್ವದಲ್ಲಿ ದಾಸಸಾಹಿತ್ಯ ಸೇವಾ ಪ್ರತಿಷ್ಠಾನವು ರಾಮಕೃಷ್ಣ ಮಠದ ಸಹಯೋಗದಲ್ಲಿ ಅ.25ರ ಶನಿವಾರ ಸಂಜೆ ಗಂಟೆ 5.30ಕ್ಕೆ ರಾಮಕೃಷ್ಣ ಆಶ್ರಮದ ಸಭಾಂಗಣದಲ್ಲಿ ದಾಸವಾಣಿ, ಹರಿದಾಸರ ಕೃತಿ ಕೀರ್ತನೆಗಳ ಗಾಯನ ಕಾರ್ಯಕ್ರಮ ನಡೆಯಲಿದೆ. ರಾಜ್ಯದ ಕಂಚಿನ ಕಂಠದ ಖ್ಯಾತ ಗಾಯಕ, ಹರಿದಾಸ ಸಾಹಿತ್ಯ- ಸಂಗೀತವನ್ನು ಜಗದಗಲಕ್ಕೂ ಪಸರಿಸುತ್ತಿರುವ ಪಂಡಿತ್ ಅನಂತ ಕುಲಕರ್ಣಿ ಅವರಿಂದ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ ಎಂದು ದಾಸಸಾಹಿತ್ಯ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಎಂಎಸ್ ಗುರುರಾಜ್ ತಿಳಿಸಿದ್ದಾರೆ.