ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಮಾಳಮಡ್ಡಿಯ ವನವಾಸಿ ಶ್ರೀರಾಮ ಮಂದಿರ ಟ್ರಸ್ಟ್ ಆಶ್ರಯದಲ್ಲಿ ಜ. 20 ಹಾಗೂ 21ರಂದು ವನವಾಸಿ ಶ್ರೀರಾಮ ಮಂದಿರದಲ್ಲಿ ಹರಿದಾಸ ಹಬ್ಬ ಏರ್ಪಡಿಸಲಾಗಿದೆ.
ಜ. 20ರಂದು ಸಂಜೆ 6 ಗಂಟೆಗೆ ಪಂ. ಭೀಮಸೇನಾಚಾರ್ಯ ಆತನೂರ ಅವರಿಂದ ಪ್ರವಚನ, 7 ಗಂಟೆಯಿಂದ ರಾಯಚೂರು ಶೇಷಗಿರಿ ದಾಸರಿಂದ ದಾಸವಾಣಿ ನಡೆಯಲಿದೆ. ಜ. 21ರಂದು ಸಂಜೆ 6 ಗಂಟೆಗೆ ಬೆಂಗಳೂರಿನ ಪಂ. ಪವಮಾನಾಚಾರ್ಯ ಕಲ್ಲಾಪುರ ಅವರಿಂದ ಪ್ರವಚನ, ನಂತರ ಮೈಸೂರು ರಾಮಚಂದ್ರ ಆಚಾರ್ಯ ಅವರಿಂದ ದಾಸವಾಣಿ ನಡೆಯಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಶ್ರೀರಾಮ ಮಂದಿರದ ಪ್ರಕಟಣೆ ತಿಳಿಸಿದೆ.