ವಿಜಯವಾಣಿ ಸುದ್ದಿಜಾಲ ಧಾರವಾಡ
ವಿದ್ಯಾರ್ಥಿ ಜೀವನದ ಆರಂಭದ ದಿನಗಳಿಂದ ಸತತ ಪ್ರಯತ್ನ ಮತ್ತು ಕಠಿಣ ಪರಿಶ್ರಮದಿಂದ ಅಧ್ಯಯನ ಮಾಡಿ ಜೀವನದಲ್ಲಿ ಯಶಸ್ಸು ಗಳಿಸಬೇಕು ಎಂದು ಕರ್ನಾಟಕ ಕಲಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ. ಜಯಶ್ರೀ ಕೊಲೋಳಗಿ ಹೇಳಿದರು.
ನಗರದ ಮಾಳಮಡ್ಡಿ ಕೆ.ಇ. ಬೋರ್ಡಿನ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ವಿದ್ಯಾರ್ಥಿ ಒಕ್ಕೂಟ ಹಾಗೂ ಕ್ರೀಡಾ ಚಟುವಟಿಕೆಗಳ ಉದ್ಘಾಟನೆ ಹಾಗೂ ಪ್ರಥಮ ಪಿಯು ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಅವರು ಮಾತನಾಡಿದರು.
ಅಧ್ಯಯನದ ಜತೆಗೆ ಒಳ್ಳೆ ಹವ್ಯಾಸಗಳನ್ನು ಬೆಳೆಸಿಕೊಳ್ಳಿ. ವಿದ್ಯಾರ್ಥಿಗಳು ಮನಸ್ಸನ್ನು ಹಿಡಿತದಲ್ಲಿಟ್ಟುಕೊಂಡು ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಒಳ್ಳೆ ಆರೋಗ್ಯ, ಆಯುಷ್ಯ, ಏಕಾಗೃತೆ ಹಾಗೂ ಒತ್ತಡ ರಹಿತ ಜೀವನಕ್ಕೆ ಯೋಗಾಸನಗಳು ಅಗತ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಎಸ್.ಎಸ್. ಹನಮಂತಗಡ ಮಾತನಾಡಿದರು. ಎಸ್.ಎಲ್. ಶೇಖರಗೋಳ, ಕ್ರೀಡಾಧಿಕಾರಿ ವಸಂತ ಮುರ್ಡೇಶ್ವರ, ಉಪಪ್ರಾಚಾರ್ಯ ಎನ್. ಎಸ್. ಗೋವಿಂದರೆಡ್ಡಿ, ಆರ್. ಕೆ. ಇಸ್ಲಾಂಪುರೆ, ಸಂತೋಷ ವಕ್ಕುಂದ, ಸುಮಾ ಬಿಸಗುಪ್ಪಿ, ಹೇಮಲತಾ ಕರಿಗಾರ, ಹನಮಂತಪ್ಪ ಕಳಸಪ್ಪನವರ, ಇತರರು ಇದ್ದರು.
ಸುನಿತಾ ಕಡಪಟ್ಟಿ ಸ್ವಾಗತಿಸಿದರು. ಪವಿತ್ರಾ ಚವ್ಹಾಣ, ಅಮೂಲ್ಯಾ ಮೊಕಾಶಿ ನಿರೂಪಿಸಿದರು. ಜಿ. ಸಿ. ಕುಲಕರ್ಣಿ ವಂದಿಸಿದರು.