ಚಿಕ್ಕಮಗಳೂರಿನ ಜೂನಿಯರ್ ಕಾಲೇಜಿನಲ್ಲಿ ಜಿಪಂ, ತಾಪಂ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ತಾಲೂಕು ಮಟ್ಟದ ವಿಜ್ಞಾನ ವಿಚಾರಗೋಷ್ಠಿ, ವಿಜ್ಞಾನ ನಾಟಕ ಮತ್ತು ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಬಿಇಒ ರವೀಶ್ ಉದ್ಘಾಟಿಸಿದರು. ನೀಲಕಂಠಪ್ಪ, ಓಂಕಾರಪ್ಪ, ನಾಗರಾಜ್, ಗಂಗಾಧರ್ ಮತ್ತಿತರರಿದ್ದರು. 
ಜಿಲ್ಲೆ

ವಿದ್ಯಾರ್ಥಿಗಳು ಗುರಿ ತಲುಪಲು ಕಠಿಣ ಪರಿಶ್ರಮ ಅಗತ್ಯ

ನಿತ್ಯಾನಂದ ಎಸ್.ಎನ್.

ಚಿಕ್ಕಮಗಳೂರು: ನಡೆದು ಹೋಗಿರುವ ಘಟನಾವಳಿಗಳನ್ನು ಇತಿಹಾನ ತಿಳಿಸಿದರು, ಮುಂದೆ ಆಗುವುದನ್ನು ವಿಜ್ಞಾನ ತಿಳಿಸುತ್ತದೆ. ಈ ಹಿನ್ನೆಲೆಯಲ್ಲಿ ಇತಿಹಾಸ ಹಾಗೂ ವಿಜ್ಞಾನದ ಕುರಿತು ವಿದ್ಯಾರ್ಥಿಗಳು ಅರಿವು ಹೊಂದಬೇಕು ಎಂದು ಬಿಇಒ ರವೀಶ್ ತಿಳಿಸಿದರು.

ನಗರದ ಜೂನಿಯರ್ ಕಾಲೇಜಿನಲ್ಲಿ ಜಿಪಂ, ತಾಪಂ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ತಾಲೂಕು ಮಟ್ಟದ ವಿಜ್ಞಾನ ವಿಚಾರಗೋಷ್ಠಿ, ವಿಜ್ಞಾನ ನಾಟಕ ಮತ್ತು ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ವೈದ್ಯ, ಇಂಜಿನಿಯರ್ ಮುಂತಾದ ಉನ್ನತ ಹುದ್ದೆಗಳ ಬಗ್ಗೆ ಕನಸು ಕಾಣಬೇಕು. ಅದನ್ನು ನನಸು ಮಾಡಲು ಕಠಿಣ ಪರಿಶ್ರಮದೊಂದಿಗೆ ಯಶಸ್ಸು ಗಳಿಸಬೇಕು. ಉನ್ನತ ಹುದ್ದೆಗೆ ಹೋದ ಬಳಿಕ ಸೇವಾ ಮನೋಭಾವದಿಂದ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಸರ್ಕಾರಿ ಶಾಲೆ, ಆಸ್ಪತ್ರೆಯಲ್ಲಿ ಉಚಿತ ಸೌಲಭ್ಯಗಳು ದೊರೆಯುತ್ತವೆ. ಆದರೆ ದೇವರ ದರ್ಶನಕ್ಕೆ ಹೋದರೆ ಶುಲ್ಕ ಪಾವತಿಸಬೇಕಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ನೀಡುವ ಸೌಲಭ್ಯವನ್ನು ಸದುಪಯೋಗ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳು ಕೌಶಲ್ಯದ ಮೂಲಕ ಬದಲಾವಣೆ ತರಲು ಸಾಧ್ಯವಿದೆ. ಇದಕ್ಕೆ ಯೋಜನಾ ಬದ್ಧವಾಗಿ ನಡೆಯಬೇಕು ಎಂದರು.
ಶಿಕ್ಷಣ ಸಂಯೋಜಕ ಕೃಷ್ಣಮೂರ್ತಿ ರಾಜ್ ಅರಸ್ ಮಾತನಾಡಿ, ಸ್ಪರ್ಧೆಗಳ ನಿಯಮಗಳನ್ನು ಸರಿಯಾಗಿ ಪಾಲಿಸಿ ವಿಚಾರ ಮಂಡನೆ ಮಾಡಿ ಜಯಗಳಿಸಿ ಎಂದು ಹಾರೈಸಿದರು.
ತಾಲ್ಲೂಕು ಮಟ್ಟದ ಈ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ, ತೃತೀತ ಎಂಬ ಮೂರು ವಿಭಾಗಗಳಿದ್ದು, ನಗದು ಬಹುಮಾನ ನೀಡಲಾಗುವುದು. ವಿಜೇತರಾದ ವಿದ್ಯಾರ್ಥಿಗಳು ತಾವು ಹೊಂದಿರುವ ಬ್ಯಾಂಕಿನ ಖಾತೆ ಪಾಸ್‌ಪುಸ್ತಕದ ಜೆರಾಕ್ಸ್ ಪ್ರತಿಯನ್ನು ಮೂರು ದಿನಗಳ ಒಳಗಾಗಿ ನೋಡಲ್ ಅಧಿಕಾರಿಗಳಿಗೆ ನೀಡುವಂತೆ ತಿಳಿಸಿದರು.
ಕಾರ್ಯಕ್ರಮವನ್ನು ಡಯಟ್ ಉಪನ್ಯಾಸಕ ಕೆ.ಜಿ.ನೀಲಕಂಠಪ್ಪ ಉದ್ಘಾಟಿಸಿದರು. ಪ್ರಮುಖರಾದ ಎಚ್.ಎಂ.ಓAಕಾರಪ್ಪ, ನೀಲಕಂಠಪ್ಪ, ಎ.ಎಂ.ನಾಗರಾಜ್, ಬಿ.ವಿ.ಗಂಗಾಧರ್, ಕೆ.ಎಂ.ಮAಜುನಾಥ್, ಪಿ.ಪ್ರಕಾಶ್, ಕೆ.ಆರ್.ಪ್ರಭಾಕರ್ ಉಪಸ್ಥಿತರಿದ್ದರು.