ಕಾಸರಗೋಡು: ಸಾಮಾಜಿಕ ಜಾಲತಾಣಗಳ ಮೂಲಕ ಪರಿಚಯಗೊಂಡ ಯುವತಿಯನ್ನು ವಿವಿಧೆಡೆ ಕರೆದೊಯ್ದು ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ರಾಜಾಪುರಂ ಪೊಲೀಸ್ ಠಾಣೆ ವ್ಯಾಪ್ತಿಯ ಪಾಣತ್ತೂರು ನಿವಾಸಿ ಜಿತ್ತು ಎಂಬಾತನ ವಿರುದ್ಧ ಚಂದೇರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಚಂದೇರ ಪೊಲೀಸ್ ಠಾಣೆ ವ್ಯಾಪ್ತಿಯ 23ರ ಹರೆಯದ ಯುವತಿ ನೀಡಿದ ದೂರಿನನ್ವಯ ಕೇಸ್ ದಾಖಲಾಗಿದೆ. ಜಿತ್ತು ತನ್ನಿಂದ ಒಂದು ಲಕ್ಷ ರೂ. ಮೌಲ್ಯದ ಚಿನ್ನದ ಬಳೆ ಪಡೆದುಕೊಂಡು ವಾಪಾಸು ಮಾಡದೆ ವಂಚಿಸಿರುವುದಲ್ಲದೆ, ತನ್ನನ್ನು ವಿವಿಧೆಡೆ ಕರೆದೊಯ್ದು ಕಿರುಕುಳ ನೀಡಿದ್ದಾನೆ. ಜಿತ್ತು ಎರಡು ಮಕ್ಕಳ ತಂದೆಯಾಗಿದ್ದು, ಸಾಮಾಜಿಕ ಜಾಲತಾಣದ ಮೂಲಕ ಪರಿಚಯ ಮಾಡಿಕೊಂಡ ಈತ ಸುಳ್ಳು ಹೇಳಿ ಪ್ರೀತಿಯ ನಾಟಕವಾಡಿ ವಂಚಿಸಿರುವುದಾಗಿ ದೂರಿನಲ್ಲಿ ತಿಳಿಸಿದ್ದಾಳೆ.