ಜಿಲ್ಲೆ

ಬಾಲಕಗೆ ಲೈಂಗಿಕ ಕಿರುಕುಳ ನೀಡಿದಾತ ಸೆರೆ

ಸೌಮ್ಯ ಆರ್

ಕಾಸರಗೋಡು: ಚಿಕನ್‌ಸ್ಟಾಲ್‌ಗೆ ಮಾಂಸ ಖರೀದಿಗೆ ಆಗಮಿಸಿದ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಕುಂಬಳೆ ಕಳತ್ತೂರು ಚೆಕ್‌ಪೋಸ್ಟ್ ಸನಿಹದ ಚಿಕನ್‌ಸ್ಟಾಲ್ ಮಾಲೀಕ ಮೊಯ್ದೀನ್ ಎಂಬಾತನನ್ನು ಕುಂಬಳೆ ಠಾಣೆ ಎಸ್‌ಐ ಕೆ.ಶಿಜೇಶ್ ನೇತೃತ್ವದ ಪೊಲೀಸರ ತಂಡ ಬಂಧಿಸಿದೆ. ಪೋಕ್ಸೊ ಅನ್ವಯ ಕೇಸು ದಾಖಲಿಸಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಕೋಳಿ ಮಾಂಸಕ್ಕಾಗಿ ತೆರಳಿದ್ದ ಸಂದರ್ಭ ಅಂಗಡಿ ಮಾಲೀಕ ತನ್ನ ಗುಪ್ತಾಂಗ ಸ್ಪರ್ಶಿಸಿ ಕಿರುಕುಳ ನೀಡಿರುವ ಬಗ್ಗೆ ಬಾಲಕ ಮನೆಯವರಲ್ಲಿ ತಿಳಿಸಿದ್ದು ಬಳಿಕ ಪೊಲೀಸರಿಗೆ ದೂರು ನೀಡಲಾಗಿತ್ತು.