ಜಿಲ್ಲೆ

ಬಡ್ಡಿ ಕಿರುಕುಳ ಪ್ರಕರಣ; ಮೂವರ ಬಂಧನ

ಮಂಜುನಾಥ ಅಂಗಡಿ

ವಿಜಯವಾಣಿ ಸುದ್ದಿಜಾಲ ಧಾರವಾಡ
ಬಡ್ಡಿ ಕಿರುಕುಳದಿಂದ ನೊಂದು ವ್ಯಕ್ತಿಯೊಬ್ಬ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆಗೆ ಸಂಬAಽಸಿ ಶಹರ ಠಾಣೆ ಪೊಲೀಸರು ಮೂವರನ್ನು ಬಂಽಸಿದ್ದಾರೆ. ಇಲ್ಲಿನ ಗೊಲ್ಲರ ಕಾಲನಿಯ ನಜೀರಸಾಬ ಅತ್ತಾರ ಎಂಬಾತ ಬಡ್ಡಿ ಕಿರುಕುಳಕ್ಕೆ ಬೇಸತ್ತು ಇತ್ತೀಚೆಗೆ ವಿಷ ಸೇವಿಸಿ ಆತ್ಮಹತ್ಯೆ ಯತ್ನಿಸಿದ್ದ. ಈತ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಕಾರ್ಯಾಚರಣೆ ನಡೆಸಿದ ಪೊಲೀಸರು ಗೊಲ್ಲರ ಕಾಲನಿಯ ಗುಲಿಗೆಪ್ಪ ಬಳ್ಳಾರಿ, ಲಕ್ಷ÷್ಮ್ಮಣ ಬಳ್ಳಾರಿ ಹಾಗೂ ಶಂಕರ ಗೊಲ್ಲರ ಎಂಬುವರನ್ನು ಬಂಽಸಿದ್ದಾರೆ.