ಜಿಲ್ಲೆ

ಮೂವರು ಆರೋಪಿಗಳಿಗೆ ಜಾಮೀನು : ಯುವತಿಗೆ ಕಿರುಕುಳ ನೀಡಿದಾತನನ್ನು ಥಳಿಸಿದ ಪ್ರಕರಣ

ಸೌಮ್ಯ ಆರ್

ಸುಳ್ಯ: ಬಸ್‌ನಲ್ಲಿ ಕಾಲೇಜು ವಿದ್ಯಾರ್ಥಿನಿಯೊಂದಿಗೆ ಅನ್ಯಕೋಮಿನ ಯುವಕನೊಬ್ಬ ಅನುಚಿತವಾಗಿ ವರ್ತಿಸಿದ ಕಾರಣಕ್ಕಾಗಿ ಆರೋಪಿ ಯುವಕನಿಗೆ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿದ್ದ ಮೂವರು ಆರೋಪಿಗಳಿಗೆ ಜಾಮೀನು ದೊರೆತಿದೆ.

ಅಬ್ದುಲ್ ನಿಯಾಝ್ ಎಂಬ ಯುವಕನ ಮೇಲೆ ಹಲ್ಲೆ ನಡೆಸಿದ ಆರೋಪಕ್ಕೊಳಗಾಗಿದ್ದ ವರ್ಷಿತ್ ಚೊಕ್ಕಾಡಿ, ಮಿಥುನ್ ಮತ್ತು ಸುಶ್ಮಿತ್ ಎಂಬ ಮೂವರಿಗೆ ಪುತ್ತೂರಿನಲ್ಲಿರುವ 5ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯವು ಜಾಮೀನು ನೀಡಿದೆ.

ಸೆ.23ರಂದು ಮುಂಜಾನೆ ಬೆಂಗಳೂರಿನಿಂದ ಸುಬ್ರಹ್ಮಣ್ಯ ಮಾರ್ಗವಾಗಿ ಸುಳ್ಯಕ್ಕೆ ಬರುತ್ತಿದ್ದ ಸರ್ಕಾರಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಸುಳ್ಯದ ಕಾಲೇಜೊಂದರ ಯುವತಿಯೊಡನೆ ಅದೇ ಬಸ್‌ನಲ್ಲಿ ಬರುತ್ತಿದ್ದ ಪಳ್ಳಂಗೋಡಿನ ಅಬ್ದುಲ್ ನಿಯಾಝ್ ಎಂಬ ಯುವಕ ಅನುಚಿತವಾಗಿ ವರ್ತಿಸಿದನೆಂಬ ಕಾರಣಕ್ಕಾಗಿ ಸುಳ್ಯದಲ್ಲಿ ಕೆಲವು ಯುವಕರು ಆತನ ಮೇಲೆ ಹಲ್ಲೆ ನಡೆಸಿದ್ದರು. ಪ್ರಕರಣದ ಇನ್ನಿಬ್ಬರು ಆರೋಪಿಗಳಾದ ಹರ್ಷಿತ್ ಮತ್ತು ವಿಜೇತ್ ನಿರೀಕ್ಷಣಾ ಜಾಮೀನಿಗಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.