ಜಿಲ್ಲೆ

ಅಪೂರ್ಣ ಸುಟ್ಟಿರುವ ಮಹಿಳೆ ಶವ ಪತ್ತೆ

ಮಂಜುನಾಥ

ಹರಪನಹಳ್ಳಿ : ತಾಲೂಕಿನ ಅರಸೀಕೆರೆ ಕಂಚಿಕೆರೆಯ ನಡುವಿರುವ  ಅರಣ್ಯದ  ನಿರ್ಜನ ಪ್ರದೇಶದಲ್ಲಿ ಅಪೂರ್ಣ ಸುಟ್ಟಿರುವ ಮಹಿಳೆ ಶವ ಪತ್ತೆಯಾಗಿದ್ದು, ಅತ್ಯಾಚಾರ ಮಾಡಿ ಕೊಲೆ‌ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಮಾಚಿಹಳ್ಳಿ  ತಾಂಡದ ಆರ್.ಅಶ್ವಿನಿ ಬಾಯಿ (32) ಎಂದು ಗುರುತಿಸಲಾಗಿದೆ.  ಗುರುವಾರ ಬೆಳಿಗ್ಗೆ 9 ಗಂಟೆಯಿಂದ 11 ಗಂಟೆ ಮದ್ಯದ ಅವಧಿಯಲ್ಲಿ ಯಾರೊ ದುಷ್ಕರ್ಮಿಗಳು, ಕೊಲೆ‌ ಮಾಡಿ, ಮೃತ ದೇಹಕ್ಕೆ ಅರೆಬರೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ, ಆರೋಪಿಗಳ ಪತ್ತೆಗೆ ಪೋಷಕರು ದೂರು ಸಲ್ಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅರಸೀಕೆರೆ ಠಾಣೆಯಲ್ಲಿ‌ ಪ್ರಕರಣ‌ ದಾಖಲಾಗಿದೆ.