ಜಿಲ್ಲೆ

ಯೂಕ್ರೇನ್‌ನಿಂದ ತಾಯ್ನಡಿಗೆ ಮರಳಿದವರಿಗೆ ಸನ್ಮಾನ

Ballari

ಹರಪನಹಳ್ಳಿ: ಯೂಕ್ರೇನ್‌ನಿಂದ ನಮ್ಮ ತಾಲೂಕಿನ ವಿದ್ಯಾರ್ಥಿಗಳು ಸುರಕ್ಷಿತವಾಗಿ ಬಂದಿರುವುದು ಸಂತೋಷದ ವಿಷಯ ಎಂದು ಎಸಿ ಚಂದ್ರಶೇಖರಯ್ಯ ಅಭಿಪ್ರಾಯ ಪಟ್ಟರು.

ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ಸೋಮುವಾರ ಆಯೋಜಿಸಿದ್ದ ತಾಯ್ನಡಿಗೆ ಮರಳಿದ ಲಾವಣ್ಯ, ವಿಕಾಸ್ ಪಾಟೀಲ್, ಸಂಜಯ್‌ಗೆ ಸನ್ಮಾನ ಮಾಡಿ, ಸಿಹಿ ವಿತರಿಸಿ ಮಾತನಾಡಿದರು.

ವಿದ್ಯಾರ್ಥಿನಿ ಲಾವಣ್ಯ ಮಾತನಾಡಿ, ಬಸ್, ರೈಲು, ವಿಮಾನಯಾನ ಇರದ ಕಾರಣ ಬಂಕ್‌ರಗಳಲ್ಲಿ ಉಳಿದೆವು. ನಾವಿದ್ದ ಸ್ಥಳದಿಂದ 100 ಕಿ.ಮೀ.ದೂರದಲ್ಲಿ ಸೆಲ್ ದಾಳಿಯಾಗಿ, ಜೀವ ಭಯ ಶುರುವಾಯಿತು. ಭಾರತೀಯ ರಾಯಭಾರಿ ಕಚೇರಿಯಿಂದ ಸಂದೇಶ ಬಂದ ಮೇಲೆ ಗಡಿವರೆಗೆ ಜೀವ ಭಯದಲ್ಲೇ ಬಂದೆವು. ಅಲ್ಲಿಂದ ಮುಂಬೈಗೆ, ನಂತರ ಬೆಂಗಳೂರಿಗೆ ಬಂದೆವು ಎಂದರು.

ಸಂಜಯ್ ಮಾತನಾಡಿ, ಯುದ್ಧ ಆರಂಭವಾಗುತ್ತಿದ್ದಂತೆ ಭಾರತದ ರಾಯಬಾರಿ ಕಚೇರಿ ಅಧಿಕಾರಿಗಳು ಬಂಕರ್‌ಗೆ ಸ್ಥಳಾಂತರಗೊಳ್ಳಲು ಸೂಚಿಸಿದರು. ಬಂಕರ್‌ನಲ್ಲಿ ನೀರು, ಆಹಾರದ ಸಮಸ್ಯೆ ಎದುರಾಗಿತ್ತು ಎಂದರು.

ವಿಕಾಸ ಪಾಟೀಲ್ ಮಾತನಾಡಿ, ಯೂಕ್ರೇನ್‌ನಿಂದ ಭಾರತಕ್ಕೆ 34 ಗಂಟೆಯಲ್ಲಿ ಬಂದಿರುವುದು ಮರೆಯಲಾಗದ ಘಟನೆ. ನಮ್ಮ ದೇಶದ ತ್ರೀವರ್ಣ ದ್ವಜ ಹಿಡಿದು ಬೇರೆ ದೇಶದವರು ಜೀವ ಉಳಿಸಿಕೊಂಡಿದ್ದು ಹೆಮ್ಮೆಯ ವಿಷಯ. ನಾವು ಇಲ್ಲಿಗೆ ಬರಲು ಸಹಕರಿಸಿದ ದೇಶ, ರಾಜ್ಯ, ಜಿಲ್ಲಾ, ತಾಲೂಕು, ಮಟ್ಟದ ಅಧಿಕಾರಿಗಳನ್ನು ಸ್ಮರಿಸಲೇ ಬೇಕು ಎಂದರು.