ಹರಪನಹಳ್ಳಿಯಲ್ಲಿ ಭಾನುವಾರ ಸಂಭವಿಸಿದ ಅಪಘಾತದಲ್ಲಿ ನುಜ್ಜುಗುಜ್ಜಾದ ಟ್ರಾೃಕ್ಟರ್ ಮತ್ತು ಟಾಟಾಏಸ್. 
ಜಿಲ್ಲೆ

ಹರಪನಹಳ್ಳಿಯಲ್ಲಿ ಟ್ರಾೃಕ್ಟರ್-ಟಾಟಾ ಏಸ್ ಡಿಕ್ಕಿಯಾಗಿ ಒಂದೇ ಕುಟುಂಬದ ಮೂವರು ಸಾವು

ಹರಪನಹಳ್ಳಿ: ಪಟ್ಟಣದ ಕುರಿಸಂತೆ ಮುಂಭಾಗ ಟ್ರಾೃಕ್ಟರ್-ಟಾಟ್‌ಏಸ್ ನಡುವೆ ಭಾನುವಾರ ರಾತ್ರಿ ಡಿಕ್ಕಿಯಾಗಿ ಮೂವರು ಸಾವಿಗೀಡಾಗಿದ್ದಾರೆ. ಟ್ರಾೃಕ್ಟರ್‌ನಲ್ಲಿದ್ದ ಹೊಳಿಯಮ್ಮ (32), ದೊಡ್ಡಹಾಳು ಹನುಮಂತಪ್ಪ (46) ಹಾಗೂ ಲಕ್ಷ್ಮವ್ವ (42) ಮೃತಪಟ್ಟವರು.

ಹರಿಹರ ತಾಲೂಕಿನ ಹೊಟ್ಟಿಗೆನಾಹಳ್ಳಿ ಗ್ರಾಮದಿಂದ ಕುಟುಂಬದ ಸದಸ್ಯರು ಟ್ರಾೃಕ್ಟರ್ ಮೂಲಕ ಕೊಟ್ಟೂರು ಗುರುಬಸವೇಶ್ವರ ದೇವಸ್ಥಾನದಲ್ಲಿ ಜವಳ ಕಾರ್ಯಕ್ರಮಕ್ಕೆ ತೆರಳುವಾಗ ಅಪಘಾತ ನಡೆದಿದೆ. ಮಾರ್ಗಮದ್ಯೆ ಬಹಿರ್ದೆಸೆಗೆಂದು ಟ್ರಾೃಕ್ಟರ್ ನಿಲ್ಲಿಸಲಾಗಿತ್ತು. ಈ ವೇಳೆ ಹರಪನಹಳ್ಳಿಯಿಂದ ಸ್ಟೇಷನರಿ ಹೊತ್ತೊಯ್ಯುತ್ತಿದ್ದ ಟಾಟಾ ಏಸ್, ವೇಗವಾಗಿ ಬಂದು ನಿಂತಿದ್ದ ಟ್ರಾೃಕ್ಟರ್‌ಗೆ ಡಿಕ್ಕಿ ಹೊಡೆದಿದೆ. ಹೊಳಿಯಮ್ಮ ಸ್ಥಳದಲ್ಲಿ ಮೃತಪಟ್ಟರು. ಹನುಮಂತಪ್ಪಗೆ ಆಸ್ಪತ್ರೆಯಲ್ಲಿ ದಾಖಲಿಸಿದರೂ ಚಿಕಿತ್ಸೆ ಫಲಿಸಲಿಲ್ಲ. ತೀವ್ರ ಗಾಯಗೊಂಡಿದ್ದ ಲಕ್ಷ್ಮವ್ವ ಸೋಮವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಐವರು ಜನರು ಗಾಯಗೊಂಡಿದ್ದಾರೆ. ಚಾಲಕ ತಲೆಮರೆಸಿಕೊಂಡಿದ್ದಾರೆ.