ಹರಪನಹಳ್ಳಿ ತೆಗ್ಗಿನಮಠದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಪೀಠಾಧ್ಯಕ್ಷ ಶ್ರೀ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ, ತಾಲೂಕು ಬೇಡ ಜಂಗಮ ಸಮಾಜದ ಅಧ್ಯಕ್ಷ ಕೆ.ಎಂ.ಶಿವಕುಮಾರಸ್ವಾಮಿ, ತೆಗ್ಗಿನಮಠ ಸಂಸ್ಥಾನದ ಕಾರ್ಯದರ್ಶಿ ಡಾ.ಟಿ.ಎಂ.ಚಂದ್ರಶೇಖರಯ್ಯ, ಮಲ್ಲಿಕಾರ್ಜುನ ಸ್ವಾಮಿ ಕಲ್ಮಠ, ಎಸ್.ಎಂ.ವೀರಭದ್ರಯ್ಯ ಇತರರಿದ್ದರು. 
ಜಿಲ್ಲೆ

ಸಮಾಜದ ಏಳಿಗೆಗೆ ಶ್ರಮಿಸಿ

ಹರಪನಹಳ್ಳಿ: ಬೇಡ ಜಂಗಮ ಸಮುದಾಯದ ಬಡ ವಿದ್ಯಾರ್ಥಿಗಳಿಗೆ ತೆಗ್ಗಿನಮಠ ಸಂಸ್ಥಾನದಿಂದ ಉಚಿತ ವಸತಿ, ಊಟ ವ್ಯವಸ್ಥೆ ಕಲ್ಪಿಸಲಾಗವುದು ಎಂದು ಸಂಸ್ಥಾನದ ಪೀಠಾಧ್ಯಕ್ಷ ಶ್ರೀ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ಚಿರಸ್ಥಹಳ್ಳಿಯ ಡಾ.ಕೆ.ಎಂ.ಮುರಿಗಯ್ಯ ಅವರ ಜ್ಞಾಪಕಾರ್ಥ ಪಟ್ಟಣದ ತೆಗ್ಗಿನಮಠದ ಸಭಾ ಭವನದಲ್ಲಿ ತಾಲೂಕು ಬೇಡ ಜಂಗಮ ಸಮಾಜದಿಂದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸಮುದಾಯದ ವಿದ್ಯಾರ್ಥಿಗಳಿಗೆ ಗುರುವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಪಾಲಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ಲಿಂಗ ಭೇದ ಮಾಡದೆ ಸಮಾನ ಶಿಕ್ಷಣ ಕೊಡಿಸಬೇಕು. ಬೇಡ ಜಂಗಮ ಸಮುದಾಯದ ಆಚಾರ-ವಿಚಾರಗಳನ್ನು ಮುಂದುವರಿಸಲು ಮಕ್ಕಳಿಗೆ ಮಾರ್ಗದರ್ಶನ ಮಾಡಬೇಕೆಂದು ಸಲಹೆ ನೀಡಿ, ಸಮುದಾಯದ ಮಕ್ಕಳು ಉನ್ನತ ಶಿಕ್ಷಣ ಪಡೆದು, ಸಮಾಜದ ಏಳಿಗೆಗಾಗಿ ಶ್ರಮಿಸಬೇಕೆಂದು ಕಿವಿಮಾತು ಹೇಳಿದರು.

ಬೇಡ ಜಂಗಮ ಸಮಾಜದ ತಾಲೂಕು ಅಧ್ಯಕ್ಷ ಕೆ.ಎಂ.ಶಿವಕುಮಾರಸ್ವಾಮಿ, ತೆಗ್ಗಿನಮಠ ಸಂಸ್ಥಾನದ ಕಾರ್ಯದರ್ಶಿ ಡಾ.ಟಿ.ಎಂ.ಚಂದ್ರಶೇಖರಯ್ಯ, ಮುಖಂಡರಾದ ಮಲ್ಲಿಕಾರ್ಜುನ ಸ್ವಾಮಿ ಕಲ್ಮಠ, ಎಸ್.ಎಂ.ವೀರಭದ್ರಯ್ಯ, ಕೆ.ಎಂ.ಗುರುಸಿದ್ದಯ್ಯ, ಟಿ.ಎಚ್.ಎಂ.ಮಲ್ಲಿಕಾರ್ಜುನಯ್ಯ, ಗ್ರಾಪಂ ಸದಸ್ಯ ಕೆ.ಎಂ.ಚೆನ್ನಮಲ್ಲಿಕಾರ್ಜುನ, ಎಚ್.ಎಂ.ಜಗದೀಶ, ಎಎಸ್‌ಎಂ ಗುರುಪ್ರಸಾದ, ಎಚ್‌ಎಂ.ಬಸವರಾಜಯ್ಯ ಇತರರಿದ್ದರು.