ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಹರಪನಹಳ್ಳಿಯಲ್ಲಿ ತಾಲೂಕು ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು. ಸಂಘದ ಅಧ್ಯಕ್ಷ ಬಸವರಾಜ ಕೊಂಡಜ್ಜಿ, ಉಪಾಧ್ಯಕ್ಷರಾದ ಡಾ.ರವಿ, ಮಂಜುನಾಥ ಪೂಜಾರ, ದಾದಾಪೀರ, ಸಿ.ಬಸವರಾಜ, ಕಾರ್ಯದರ್ಶಿ ಡಿ.ಪಿ.ಮಲ್ಲಿಕಾರ್ಜುನ, ಶಿಕ್ಷಕರು, ಸಿಬ್ಬಂದಿ ಇದ್ದರು. 
ಜಿಲ್ಲೆ

ನಿಯಮಗಳನ್ನು ಸರಳೀಕರಣಗೊಳಿಸಿ

ಹರಪನಹಳ್ಳಿ: ಹೊಸ ಶಾಲೆಗಳನ್ನು ಆರಂಭಿಸಲು ನಿಯಮಗಳನ್ನು ಸರಳಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತಾಲೂಕು ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘದ ಪದಾಧಿಕಾರಿಗಳು ಗುರುವಾರ ಶಾಲೆಗಳನ್ನು ಬಂದ್ ಮಾಡಿ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಅನುಮತಿ, ನವೀಕರಣ ಪ್ರಕ್ರಿಯೆ ಸರಳಗೊಳಿಸಬೇಕು. 1995 ನಂತರ ಆರಂಭವಾದ ಖಾಸಗಿ ಶಾಲಾ-ಕಾಲೇಜುಗಳನ್ನು ಅನುದಾನಕ್ಕೊಳಪಡಿಸಬೇಕು. 371( ಜೆ) ಅಡಿ ಸಿಗಬೇಕಾದ ಎಲ್ಲ ಸೌಲಭ್ಯಗಳನ್ನು ನೀಡಬೇಕು. ಬಡ ಮಕ್ಕಳಿಗೆ ಅನುಕೂಲವಾಗುವ ಆರ್‌ಟಿಇ ಮರು ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆ ನಂತರ ತಹಸೀಲ್ದಾರ್ ಬಿ.ವಿ.ಗಿರೀಶಬಾಬು, ಬಿಇಒ ಎಚ್.ಲೇಪಾಕ್ಷಪ್ಪಗೆ ಮನವಿ ಸಲ್ಲಿಸಿದರು. ಸಂಘದ ಅಧ್ಯಕ್ಷ ಬಸವರಾಜ ಕೊಂಡಜ್ಜಿ, ಉಪಾಧ್ಯಕ್ಷರಾದ ಡಾ.ರವಿ, ಮಂಜುನಾಥ ಪೂಜಾರ, ದಾದಾಪೀರ, ಸಿ.ಬಸವರಾಜ, ಕಾರ್ಯದರ್ಶಿ ಡಿ.ಪಿ.ಮಲ್ಲಿಕಾರ್ಜುನ, ಅನಿಲ್, ಪಿ.ಮಂಜುನಾಥ, ಹಾಶೀಮ್, ಮಹಾರುದ್ದಾಚಾರ್, ತಾನಾಜಿ, ಅನ್ನಪೂರ್ಣ, ಚನ್ನಬಸವನಗೌಡ, ಸಂತೋಷ, ಆನಂದಪ್ಪ, ಅರವಿಂದ, ಬಸವಲಿಂಗಪ್ಪ, ವಾಗಿಶ್ ವಕೀಲ, ವೀರೇಶ, ಕೆ.ಎಸ್. ಬಸವರಾಜಪ್ಪ, ತಿಮ್ಮಪ್ಪ, ಶಿಕ್ಷಕರು, ಸಿಬ್ಬಂದಿ ಇದ್ದರು.