ಹರಪನಹಳ್ಳಿ: ಕೆಪಿಸಿಸಿ ಮಹಿಳಾ ಘಟಕದ ಪ್ರದಾನ ಕಾರ್ಯದರ್ಶಿಯಾಗಿರುವ ಎಂ.ಪಿ.ಲತಾ ಪಕ್ಷಕ್ಕೆ ಜೀವ ತುಂಬಿದ್ದಾರೆ ಎಂದು ಪುರಸಭಾ ಮಾಜಿ ಅದ್ಯಕ್ಷ ಎಂ.ವಿ.ಅಂಜಿನಪ್ಪ ಬಣ್ಣಿಸಿದರು.
ತಾಲೂಕಿನ ಬಾಗಳಿ ಗ್ರಾಮದ ಶಂಕ್ರಪ್ಪ, ಕೆಂಚಪ್ಪ ಸಮುದಾಯ ಭವನದಲ್ಲಿ ಸೋಮವಾರ ಏರ್ಪಡಿಸಿದ್ದ ಕೆಪಿಸಿಸಿ ಮಹಿಳಾ ಘಟಕದ ಪ್ರದಾನ ಕಾರ್ಯದರ್ಶಿ ಎಂ.ಪಿ.ಲತಾ-ನಿವೃತ್ತ ಕಾರ್ಯಪಾಲಕ ಇಂಜಿನಿಯರ್ ಎಚ್ .ಎಂ.ಮಲ್ಲಿಕಾರ್ಜುನ ದಂಪತಿ, ಕಸಾಪ ತಾಲೂಕು ಅದ್ಯಕ್ಷ ಕೆ.ಉಚ್ಚೆಂಗೆಪ್ಪ, ವಿವಿಧ ಕ್ಷೇತ್ರಗಳ ಸಾಧಕರ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿ, ಕಾಲಿಗೆ ಚಕ್ರ ಕಟ್ಟಿಕೊಂಡಂತೆ ತಾಲೂಕಿನಲ್ಲಿ ತಿರುಗಿ ಕಾಂಗ್ರೆಸ್ ಪಕ್ಷವನ್ನು ಎಂ.ಪಿ.ಲತಾ ಸಂಘಟಿಸಿದ್ದಾರೆ. ನಾಟಿ ವೈದ್ಯ ಹೊಸೂರಪ್ಪ ಕೀಲು-ಮೂಳೆ ತಜ್ಞರಾಗಿ ಹೆಸರು ಮಾಡಿದ್ದಾರೆ. ರಾಜಕೀಯ ರಂಗದಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ ಎಂದರು.
ಸನ್ಮಾನಿತ ನಿವೃತ್ತ ಕಾರ್ಯಪಾಲಕ ಇಂಜಿನಿಯರ್ ಎಚ್ .ಎಂ.ಮಲ್ಲಿಕಾರ್ಜುನ ಮಾತನಾಡಿ, ಕಾಂಗ್ರೆಸ್ ಕಾರ್ಯಕರ್ತನಾಗಿ ಕೆಲಸ ಮಾಡುವುದಾಗಿ, ಕಾರ್ಯಕರ್ತರ ಜತೆಗಿದ್ದು ಪಕ್ಷವನ್ನು ಅಧಿಕಾರಕ್ಕೆ ತರಲು ಪ್ರಯತ್ನಿಸುವುದಾಗಿ ಹೇಳಿದರು. ಕೆಪಿಸಿಸಿ ಮಹಿಳಾ ಘಟಕದ ಪ್ರದಾನ ಕಾರ್ಯದರ್ಶಿ ಎಂ.ಪಿ.ಲತಾ ಮಾತನಾಡಿ, ‘ನಮ್ಮ ಯಜಮಾನರು ನಿವೃತ್ತಿಯಾಗಿ ರಾಜಕೀಯಕ್ಕೆ ಬಂದಿರುವುದರಿಂದ ನನಗೆ ಬಹಳಷ್ಚು ಸಹಾಯವಾಗಿದೆ’ ಎಂದರು.
ಕಸಾಪ ತಾಲೂಕು ಅಧ್ಯಕ್ಷ, ರೈತ ಮಹಿಳೆಯರು, ಹಿರಿಯ ಮುಖಂಡರಿಗೆ, ವಿವಿಧ ಕ್ಷೇತ್ರಗಳ ಸಾಧಕರನ್ನು ಈ ವೇಳೆ ಸನ್ಮಾನಿಸಲಾಯಿತು. ನಾಟಿ ವೈದ್ಯರೂ ಆದ ಕಾಂಗ್ರೆಸ್‌ನ ಹಿರಿಯ ಮುಖಂಡ ಬಿ.ಬಿ.ಹೊಸೂರಪ್ಪ ಅದ್ಯಕ್ಷತೆ ವಹಿಸಿದ್ದರು. ಗ್ರಾಪಂ ಅಧ್ಯಕ್ಷೆ ಕೊಟ್ರಮ್ಮ, ಉಪಾದ್ಯಕ್ಷೆ ಗೀತಮ್ಮ, ಹುಲ್ಲಿಕಟ್ಟಿ ಚಂದ್ರಪ್ಪ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಕಂಚಿಕೇರಿ ಜಯಲಕ್ಷ್ಮೀ, ಯುವ ಕಾಂಗ್ರೆಸ್ ಅಧ್ಯಕ್ಷ ಮತ್ತೂರು ಬಸವರಾಜ, ಶಿವರಾಜ, ಉದಯಶಂಕರ, ಪ್ರಸಾದ್ ಕಾವಡಿ, ಕನಕನಬಸ್ಸಾಪುರ ಮಂಜುನಾಥ, ಎಚ್ .ವಸಂತಪ್ಪ, ಮಾಗಳದ ನೀಲಮ್ಮ, ರೇಣುಕಮ್ಮ, ಚಿಕ್ಕಳ್ಳಿ ಮಂಜಣ್ಣ,ಎಚ್ .ಗೌರಮ್ಮ ಇತರರು ಇದ್ದರು.