ಜಿಲ್ಲೆ

ಪಾದಯಾತ್ರಿಗಳಿಗೆ ಕಲ್ಲಂಗಡಿ ನೀಡಿದ ಗಫಾರ್‌ಸಾಬ್

Davanagere

ಹರಪನಹಳ್ಳಿ: ಕೊಟ್ಟೂರು ಶ್ರೀ ಗುರುಬಸವೇಶ್ವರ ರಥೋತ್ಸವಕ್ಕೆ ಪಟ್ಟಣದ ಮಾರ್ಗವಾಗಿ ಪಾದಯಾತ್ರೆಯಲ್ಲಿ ತೆರಳುತ್ತಿದ್ದ ಭಕ್ತರಿಗೆ ಉಚಿತವಾಗಿ ಕಲ್ಲಂಗಡಿ ಹಣ್ಣು ನೀಡುವ ಮೂಲಕ ಮುಸ್ಲಿಂ ವ್ಯಕ್ತಿಯೊಬ್ಬರು ಭಕ್ತಿ ಮೆರೆದಿದ್ದಾರೆ.

ಗಫಾರ್ ಸಾಬ್ ಪಟ್ಟಣದ ಕೊಟ್ಟೂರು ರಸ್ತೆಯ ಅಗ್ನಿಶಾಮಕ ಠಾಣೆ ಎದುರು ಟೆಂಟ್ ಹಾಕಿಕೊಂಡು ತಮಿಳುನಾಡಿನಿಂದ ತರಿಸಿದ್ದ ಒಂದು ಟನ್ ಕಲ್ಲಂಗಡಿ ಹಣ್ಣನ್ನು ಸೋಮವಾರ ಬೆಳಗ್ಗೆಯಿಂದ ಸಂಜೆವರೆಗೂ ಪಾದಯಾತ್ರಿಗಳಿಗೆ ವಿತರಿಸಿದರು.

ದೇವರು ಎಲ್ಲ ಕಡೆ ಇದ್ದಾನೆ. ನಾನು ಸಹ ಪಾದಯಾತ್ರಿಗಳಿಗೆ ಭಕ್ತಿಯಿಂದ ಏನಾದರೂ ಸೇವೆ ಮಾಡಬೇಕು ಅನ್ನಿಸಿತು. ನನ್ನ ಕೈಲಾದಷ್ಟು ಕಲ್ಲಂಗಡಿ ಹಣ್ಣು ನೀಡುತ್ತಿದ್ದೇನೆ ಎಂದರು ಗಫಾರ್ ಸಾಬ್.