ಹರಪನಹಳ್ಳಿ ಎಲ್‌ಐಸಿ ಕಚೇರಿ ಮುಂದೆ ಅಖಿಲ ಭಾರತ ವಿಮಾ ನೌಕರರ ಸಂಘದಿಂದ ಪ್ರತಿಭಟನೆ ನಡೆಸಲಾಯಿತು. ಶಾಖಾ ಕಾರ್ಯದರ್ಶಿ ಪಿ.ನಾಗನಗೌಡ, ಖಜಾಂಚಿ ಪ್ರಶಾಂತ್ ಇಟಿಗಿ, ಪ್ರಮುಖರಾದ ಕೆ.ಗಿರಿಪ್ರಸಾದ್, ಯಶವಂತರೆಡ್ಡಿ, ವೀರಭದ್ರಪ್ಪ, ನಾಗರಾಜ್, ನರೇಂದ್ರ, ಶಿವಕುಮಾರ್, ರವಿಶಂಕರ್ ಇತರರಿದ್ದರು. 
ಜಿಲ್ಲೆ

ಹಳೇ ಯೋಜನೆ ಜಾರಿಗೊಳಿಸಿ

ಹರಪನಹಳ್ಳಿ: ವಿಮೆ ಕಂತಿನ ಮೇಲೆ ಜಿಎಸ್‌ಟಿ ವಿಧಿಸಬಾರದು. ಹೊಸ ಪಿಂಚಣಿ ಪದ್ಧತಿ ಹಿಂಪಡೆದು ಹಳೆಯ ಪಿಂಚಣಿ ಯೋಜನೆ ಜಾರಿಗೊಳಿಸಬೇಕೆಂದು ಅಖಿಲ ಭಾರತ ವಿಮಾ ನೌಕರರ ಸಂಘದ ಶಾಖೆಯ ಅಧ್ಯಕ್ಷ ಕೆ.ಹನುಮಂತಪ್ಪ ಆಗ್ರಹಿಸಿದರು.

ನಗರದ ಎಲ್‌ಐಸಿ ಕಚೇರಿ ಮುಂಭಾಗದಲ್ಲಿ ಅಖಿಲ ಭಾರತ ವಿಮಾ ನೌಕರರ ಸಂಘದಿಂದ ಬುಧವಾರ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು. ಜನವಿರೋಧಿ, ರೈತ ವಿರೋಧಿ ಹಾಗೂ ಕಾರ್ಮಿಕ ವಿರೋಧಿ ನೀತಿಗಳನ್ನು ಜಾರಿಗೊಳಿಸಿರುವ ಕೇಂದ್ರ ಸರ್ಕಾರದ ನಡೆ ಖಂಡನೀಯ.

ವಿಮಾ ಕಂತಿನ ಮೇಲೆ ಜಿಎಸ್‌ಟಿ ವಿಧಿಸುವುದರಿಂದ ಪಾಲಿಸಿದಾರರಿಗೆ ಹೊರೆಯಾಗುತ್ತಿದೆ. ಹಳೆಯ ಪಿಂಚಣಿಯನ್ನೇ ಯಥಾವತ್ತಾಗಿ ಮುಂದುವರಿಸಬೇಕು. ವಿಮೆ ವಲಯದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅವಕಾಶ ನೀಡಬಾರದು ಎಂದು ಆಗ್ರಹಿಸಿದರು.