ಹರಪನಹಳ್ಳಿ ಹಿರೇಕೆರೆ ಏರಿ ಮೇಲೆ ಪುರಸಭೆಯಿಂದ ಸ್ವಚ್ಛತಾ ಕಾರ್ಯ ನಡೆಯಿತು. ಸಹಾಯಕ ಆಯುಕ್ತ ಚಿದಾನಂದ ಗುರುಸ್ವಾಮಿ, ಪುರಸಭೆ ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ್, ಪರಿಸರ ತಜ್ಞ ಅಮರೇಶ್, ವಕೀಲ ಮಂಜುನಾಥ ಕಣಿವಿಹಳ್ಳಿ ವಕೀಲ, ಇಜಂತ್ಕರ್ ಮಂಜುನಾಥ ಇತರರಿದ್ದರು. 
ಜಿಲ್ಲೆ

ಹಿರೇಕೆರೆಗೆ ತ್ಯಾಜ್ಯ ಎಸೆಯದಿರಿ

ನರೇಶ್ ಕುಮಾರ್

ಹರಪನಹಳ್ಳಿ: ಜಲಚರಗಳು, ಜನಜಾನುವಾರುಗಳಿಗೆ ಕೆರೆಕಟ್ಟೆಗಳು ಜೀವನಾಡಿಯಾಗಿವೆ ಎಂದು ಜೀವಜಲ ಟ್ರಸ್ಟ್ ಅಧ್ಯಕ್ಷ ಹೇಮಣ್ಣ ಮೋರಿಗೇರಿ ಹೇಳಿದರು.

ಪಟ್ಟಣದ ಹಿರೇಕೆರೆಯ ಏರಿಯಲ್ಲಿ ಪುರಸಭೆಯಿಂದ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯದಲ್ಲಿ ಮಾತನಾಡಿದರು. ಜೀವಜಲಗಳಾದ ಕೆರೆಗಳಲ್ಲಿ ಪ್ಲಾಸ್ಟಿಕ್ ಹಾಗೂ ಅನುಪಯುಕ್ತ ತ್ಯಾಜ್ಯ ವಸ್ತುಗಳನ್ನು ಹಾಕಿ ಕಲುಷಿತಗೊಳಿಸದಂತೆ ಮನವಿ ಮಾಡಿದರು.

ವೈದ್ಯ ಮಂಜುನಾಥ ಮಾತನಾಡಿ, ನೀರು ಮಲಿನಗೊಂಡರೆ ಹಲವಾರು ರೋಗಗಳಿಗೆ ದಾರಿ ಮಾಡಿಕೊಟ್ಟಂತಾಗುತ್ತದೆ. ಆದ್ದರಿಂದ ಹಿರೇಕೆರೆ ಕಲುಷಿತವಾಗದಂತೆ ಕಾಪಾಡಬೇಕು ಎಂದರು.

ಪ್ರಮುಖರಾದ ಪ್ರಿಯಾಂಕಾ ಅಧಿಕಾರ್, ರವೀಂದ್ರ ಅಧಿಕಾರ್, ಪ್ರಸನ್ನ ಕುಮಾರ್ ಜೈನ್, ಮಹಮ್ಮದ್ ಜಾವೇದ್, ಟಿ.ಗುರುಮೂರ್ತಿ, ಪವಾಡಿ ದೇವೇಂದ್ರಪ್ಪ ಇತರರಿದ್ದರು.